ದೇಶ

ವಿಮಾನದಲ್ಲಿ ರಷ್ಯಾ ಪ್ರಜೆಯಿಂದ ಹಸ್ತಮೈಥುನ, ದೆಹಲಿಯಲ್ಲಿ ಬಂಧನ!

ಇಸ್ತಾನ್‌ಬುಲ್‌ನಿಂದ ನವದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ರಷ್ಯಾ ಪ್ರಜೆಯೊರ್ವ ಹಸ್ತ ಮೈಥುನ ಮಾಡಿಕೊಂಡಿದ್ದು ಈ ಸಂಬಂಧ ಆತನನ್ನು ದೆಹಲಿಯ ಇಂದಿರಾಗಾಂಧಿ...

ವಿಮಾನದಲ್ಲಿ ರಷ್ಯಾ ಪ್ರಜೆಯಿಂದ ಹಸ್ತಮೈಥುನ, ದೆಹಲಿಯಲ್ಲಿ ಬಂಧನ!
ಸಂಗ್ರಹ ಚಿತ್ರ
Published On :
ನವದೆಹಲಿ: ಇಸ್ತಾನ್‌ಬುಲ್‌ನಿಂದ ನವದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ರಷ್ಯಾ ಪ್ರಜೆಯೊರ್ವ ಹಸ್ತ ಮೈಥುನ ಮಾಡಿಕೊಂಡಿದ್ದು ಈ ಸಂಬಂಧ ಆತನನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 
ಆರೋಪಿ ವ್ಯಕ್ತಿಯ ಪಕ್ಕದಲ್ಲಿ ಭಾರತೀಯ ಮಹಿಳೆಯೊರ್ವರು ಕುಳಿತಿದ್ದರು. ಈ ವೇಳೆ ವ್ಯಕ್ತಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಅಲ್ಲಿಗೆ ಬಂದ ವಿಮಾನ ಸಿಬ್ಬಂದಿ ಆತನನ್ನು ಅಲ್ಲಿಂದ ಬೇರೆ ಸೀಟಿಗೆ ಕಳುಹಿಸಿದ್ದಾರೆ. 
ಟರ್ಕಿಶ್ ಏರ್ ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆಸಿದ್ದು ವಿಮಾನ ದೆಹಲಿಯಲ್ಲಿ ಇಳಿಯುವುದಕ್ಕೂ ಮುನ್ನ ಭದ್ರತಾ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ವಿಮಾನ ಇಳಿಯುತ್ತಿದ್ದಂತೆ ಅಲ್ಲಿಗೆ ದಾವಿಸಿದ  ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಆತನನ್ನು ಬಂಧಿಸಿ ದೆಹಲಿಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.