ದೇಶ

ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೆಂಬಲ: ಹಫೀಜ್ ಸಯೀದ್ 'ಆತಂಕಕಾರಿ' ಎಂದ ಅಮೆರಿಕ

26/11 ರ ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಅಮೆರಿಕ ಭಾರತವನ್ನು ಬೆಂಬಲಿಸಿದ್ದು, ಉಗ್ರ ಹಫೀಜ್ ಸಯೀದ್ ನ್ನು ಆತಂಕಕಾರಿ ಎಂದು ಹೇಳಿದೆ.

ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೆಂಬಲ: ಹಫೀಜ್ ಸಯೀದ್  'ಆತಂಕಕಾರಿ' ಎಂದ ಅಮೆರಿಕ
ಹಫೀಜ್ ಸಯೀದ್
Published On :
ವಾಷಿಂಗ್ ಟನ್: 26/11 ರ ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಅಮೆರಿಕ ಭಾರತವನ್ನು ಬೆಂಬಲಿಸಿದ್ದು, ಉಗ್ರ ಹಫೀಜ್ ಸಯೀದ್ ನ್ನು ಆತಂಕಕಾರಿ ಎಂದು ಹೇಳಿದೆ. 
ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ನ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ಬಗ್ಗೆ ಅಮೆರಿಕ ಕಾಂಗ್ರೆಸ್ ನ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, 2008 ರ ಮುಂಬೈ ಉಗ್ರ ದಾಳಿಯ ಹಿಂದೆ ಹಫೀಜ್ ಸಯೀದ್ ನ ಕೈವಾಡವಿದ್ದು ಆತನನ್ನು ಗೃಹ ಬಂಧನದಿಂದ ಮುಕ್ತಗೊಳಿಸಲಾಗಿದ್ದು, ಈ ಬಗ್ಗೆ ನಮಗೆ ಆತಂಕವಿದೆ ಎಂದು ಅಮೆರಿಕ ವಕ್ತಾರರು ಹೇಳಿದ್ದಾರೆ. 
ಭಾರತವನ್ನು ಬೆಂಬಲಿಸಿರುವ ಅಮೆರಿಕ ವಕ್ತಾರರು ಭಾರತ, ಅಮೆರಿಕ ಸಂಬಂಧ ಉತ್ತಮವಾಗಿದೆ, ಪ್ರಧಾನಿ ನರೇಂದ್ರ ಮೋದಿ ನೇತೃವ್ತದ ಸರ್ಕಾರದೊಂದಿಗೆ ನಮ್ಮ ಸಂಬಂಧ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.