ದೇಶ

ನಾಲ್ಕು ವರ್ಷಗಳ ಮೋದಿ ಸರ್ಕಾರ: ಶೇ. 57ರಷ್ಟು ಜನರಿಗೆ ತೃಪ್ತಿ: ಸರ್ವೇ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸಿದ್ದು ಇನ್ನು ನಾಲ್ಕು ವರ್ಷಗಳ ಮೋದಿ ಸರ್ಕಾರದ ಆಡಳಿತದ ಪರ...

ನಾಲ್ಕು ವರ್ಷಗಳ ಮೋದಿ ಸರ್ಕಾರ: ಶೇ. 57ರಷ್ಟು ಜನರಿಗೆ ತೃಪ್ತಿ: ಸರ್ವೇ
ನರೇಂದ್ರ ಮೋದಿ
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸಿದ್ದು ಇನ್ನು ನಾಲ್ಕು ವರ್ಷಗಳ ಮೋದಿ ಸರ್ಕಾರದ ಆಡಳಿತದ ಪರ ಶೇಖಡ 57ರಷ್ಟು ಜನರು ತೃಪ್ತಿ ಹೊಂದಿದ್ದಾರೆ ಎಂಬ ಅಂಶ ಸರ್ವೇಯೊಂದರಲ್ಲಿ ಬಹಿರಂಗಗೊಂಡಿದೆ. 
ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣ ಬದಲಾವಣೆ, ಪಾಕಿಸ್ತಾನದೊಂದಿಗೆ ನಿರ್ವಹಣೆ, ಭಯೋತ್ಪಾದನೆ ವಿರುದ್ಧ ಹೋರಾಟ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ತೆರಿಗೆ ಕಿರಿಕಿರಿಯನ್ನು ಕಡಿಮೆ ಮಾಡಿರುವುದು ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ಆನ್ ಲೈನ್ ಕಮ್ಯುೂನಿಟಿ ವೆಬ್ ಸೈಟ್ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 
ಕಳೆದ ನಾಲ್ಕು ವರ್ಷದಲ್ಲಿ ಎನ್ಡಿಎ ಸರ್ಕಾರದಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ಚಿತ್ರಣ ಬದಲಾವಣೆ ಮತ್ತು ಪ್ರಭಾವದ ಕುರಿತಂತೆ ಶೇಖಡ 82ರಷ್ಟು ಜನರು ಸಹ ಮತ ವ್ಯಕ್ತಪಡಿಸಿದ್ದಾರೆ. 
Story image
ಮಹಿಳಾ ಮತ್ತು ಮಕ್ಕಳ ವಿರುದ್ಧ ಅಪರಾಧ ನಿಗ್ರಹ, ಉದ್ಯೋಗಾವಕಾಶ ಸೃಷ್ಟಿ, ರೈತರ ಜೀವನವನ್ನು ಸುಧಾರಿಸುವುದು, ಜೀವನ ವೆಚ್ಚ ಮತ್ತು ಆರೋಗ್ಯ ಕಡಿಮೆ ಮಾಡುವುದು ಕುರಿತಂತೆ  ಕೇಂದ್ರ ಸರ್ಕಾರವು ಪರ ಕಡಿಮೆ ಪ್ರಮಾಣದ ಅಭಿಪ್ರಾಯ ವ್ಯಕ್ತವಾಗಿದೆ. 
ಇನ್ನು ಜೀವನದ ಗುಣಮಟ್ಟದ ಪ್ರಮುಖ ಸೂಚಕವೆಂದರೆ ಮನೆಯ ಬಜೆಟ್ ಮೇಲಿನ ಬೆಲೆ ಕುರಿತಂತೆ ಶೇಕಡಾ 60 ರಷ್ಟು ಜನರು ಅವಶ್ಯಕ ಸರಕುಗಳ ಬೆಲೆ ಮತ್ತು ಜೀವನ ವೆಚ್ಚ ಕಡಿಮೆಯಾಗುವುದಿಲ್ಲ ಎಂದು ಹೇಳಿದರು. ಎನ್ಡಿಎ ಸರ್ಕಾರದ ಕಳೆದ ನಾಲ್ಕು ವರ್ಷಗಳಲ್ಲಿ ಅಗತ್ಯ ಸರಕುಗಳ ಬೆಲೆ ಇಳಿಮುಖವಾಗಿದೆ ಎಂದು 33 ಶೇ. ನಾಗರಿಕರು ಮಾತ್ರ ನಂಬುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.