ಕೇರಳದಲ್ಲಿ ಮೊದಲ ಲಿಂಗಪರಿವರ್ತಿತರ ಮದುವೆ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೂರ್ಯ, ಇಶಾನ್
ಲಿಂಗಪರಿವರ್ತಿತರಾದ ಸೂರ್ಯ ಮತ್ತು ಇಶಾನ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ....

Published On :
ತಿರುವನಂತಪುರಂ: ಲಿಂಗಪರಿವರ್ತಿತರಾದ ಸೂರ್ಯ ಮತ್ತು ಇಶಾನ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕೇರಳದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಮೂಲಕ ರಾಜ್ಯದ ಇತಿಹಾಸದಲ್ಲೇ ಮೊದಲ ಲಿಂಗಪರಿವರ್ತಿತ ದಂಪತಿ ಎಂಬ ಹೊಸ ದಾಖಲೆ ಬರೆದಿದ್ದಾರೆ.
ಹೆಣ್ಣಾಗಿ ಜನಿಸಿದ್ದ 33 ವರ್ಷದ ಇಶಾನ್ 2014ರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡು ಗಂಡಾಗಿ ಬದಲಾಗಿದ್ದರು. ಇನ್ನು 31 ವರ್ಷದ ಸೂರ್ಯ ಸಹ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾಗಿ ಬದಲಾಗಿದ್ದರು. ಈ ಇಬ್ಬರೂ ಇಂದು ತಿರುವನಂತಪುರಂನ ಮನ್ನಂ ಕ್ಲಬ್ ನಲ್ಲಿ ವಿಶೇಷ ಮದುವೆ ಕಾಯ್ದೆ ಅಡಿ ಮದುವೆಯಾದರು. ಈ ಕ್ಷಣಕ್ಕೆ ನೂರಾರು ಲಿಂಗಪರಿವರ್ತಿತರು ಸಾಕ್ಷಿಯಾದರು.
ಒಂದು ಸಮಯದಲ್ಲಿ ಅವನು ಅವಳಾಗಿಯೂ, ಅವಳು ಅವನಾಗಿ ಇದ್ದ ಇಶಾನ್ ಮತ್ತು ಸೂರ್ಯ ಈಗ ಮದುವೆಯಾಗುವ ಮೂಲಕ ಸಮಾಜದಲ್ಲಿ ಲಿಂಗ ಪರಿವರ್ತಿತರ ಬಗ್ಗೆ ಇರುವ ಪೂರ್ವಗ್ರಹಗಳನ್ನು ತೊಡೆದುಹಾಕಲು ಮುಂದಾಗಿದ್ದಾರೆ.
ಟೀವಿ ನಟರಾಗಿ ಹೆಸರು ಮಾಡುತ್ತಿರುವ ಸೂರ್ಯ ಪಟ್ಟೂರಿನ ವಿಜಕುಮಾರ್ ಅವರ ಪುತ್ರಿಯಾಗಿದ್ದು, ಇಶಾನ್ ವಲ್ಲಕಡುವಿನ ಮೊಹಮ್ಮದ್ ಕಬೀರ್ ಅವರ ಪುತ್ರ. ಲಿಂಗಪರಿವರ್ತನೆ ಮಾಡಿಕೊಂಡ ನಂತರ ಇವರಿಬ್ಬರೂ ತಮ್ಮ ತಮ್ಮ ಕುಟುಂಬದಿಂದ ದೂರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


