ದೇಶ

ಕಾವೇರಿ ವಿವಾದ 'ದುಸ್ತರ' ಸಮಸ್ಯೆ ಅಲ್ಲ: ಕಮಲ್ ಹಾಸನ್

ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ...

ಕಾವೇರಿ ವಿವಾದ 'ದುಸ್ತರ' ಸಮಸ್ಯೆ ಅಲ್ಲ: ಕಮಲ್ ಹಾಸನ್
ಕಮಲ್ ಹಾಸನ್
Published On :

ಚೆನ್ನೈ: ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ದುಸ್ತರ ಸಮಸ್ಯೆಯಲ್ಲ, ರಾಜಕೀಯದಿಂದಾಗಿ ಪರಿಹಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂದು ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ ಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.

ಕಾವೇರಿ ವಿವಾದ ಬಗೆಹರಿಸಲಾಗದಷ್ಟು ದೊಡ್ಡ ಸಮಸ್ಯೆಯಲ್ಲ. ರಾಜಕೀಯವನ್ನು ಬದಿಗಿಟ್ಟು ವಿವೇಚನಯುತವಾಗಿ ಆಲೋಚಿಸಿದರೆ ತಕ್ಷಣವೇ ಅದಕ್ಕೆ ಪರಿಹಾರ ಹುಡುಕಲು ಸಾಧ್ಯ ಎಂದು ಹೇಳಿದರು.

ಕಾವೇರಿ ನೀರು ಬಳಕೆಯಾಗುವ ನಿಜ ಫಲಾನುಭವಿಗಳಾದ ರೈತರ ಕೈಗೆ ನೀಡಿದರೆ ಇದಕ್ಕೊಂದು ಪರಿಹಾರ ಹುಡುಕಬಹುದು ಎಂದರು.

ಇದಕ್ಕೆ ಸಂಬಂಧಪಡದ ವ್ಯಕ್ತಿಗಳು ಬರುತ್ತಾರೆ. ಕಾವೇರಿ ನೀರಿನ ನಿಜವಾದ ಬಳಕೆದಾರರ ಕೈಗೆ ಈ ವಿಚಾರವನ್ನು ನೀಡಿದರೆ ಇದಕ್ಕೆ ಪರಿಹಾರ ಹುಡುಕಬಹುದು ಎಂದು ಹೇಳಿದರು.ಎಫ್ ಕೆಸಿಸಿಐಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ವಿಶೇಷ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ಬೆರೆತಿದೆ. ಹಲವು ವಿಷಯಗಳು ಇದನ್ನು ಹಾಳು ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನೀರಿನ ಸಂರಕ್ಷಣೆಯನ್ನು ನಾವು ಮಾಡಬಹುದು ಎಂದಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡಿಗರ ಹಕ್ಕುಗಳ ಬಗ್ಗೆ ಹೋರಾಟ ನಡೆಸಿ ನಮಗೆ ಬೇಕಾದುದನ್ನು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.