ಆನಂದ್ ಪಿರಾಮಲ್ ಜೊತೆ ಮುಕೇಶ್ ಅಂಬಾನಿ ಪುತ್ರಿ ಇಶಾ ನಿಶ್ಚಿತಾರ್ಥ
ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯವರ ಏಕೈಕ ಪುತ್ರಿ ಇಶಾ ...

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯವರ ಏಕೈಕ ಪುತ್ರಿ ಇಶಾ ಅಂಬಾನಿ ಪಿರಾಮಲ್ ಸಮೂಹದ ಮುಖ್ಯಸ್ಥ ಅಜಯ್ ಪಿರಾಮಲ್ ಪುತ್ರ ಆನಂದ್ ಪಿರಾಮಲ್ ಜತೆ ಈ ವರ್ಷಾಂತ್ಯದಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ಮಹಾಬಲೇಶ್ವರ ದೇಗುಲದಲ್ಲಿ ಕಳೆದ ಭಾನುವಾರ ನಡೆದ ಸರಳ ನಿಶ್ಚಿತಾರ್ಥ ಸಮಾರಂಭದಲ್ಲಿ ಆನಂದ್ ಮತ್ತು ಇಶಾ ಉಂಗುರ ಬದಲಾಯಿಸಿಕೊಂಡರು.ಮುಖೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಮತ್ತು ಅನಂತ್ ಅಂಬಾನಿ, ಆನಂದ್ ಪಿರಾಮಲ್ ಕುಟುಂಬ ವರ್ಗದವರು ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಹಾರ್ವರ್ಡ್ ಬಿಜಿನೆಸ್ ಸ್ಕೂಲ್ನಲ್ಲಿ ಪದವಿ ಪಡೆದಿರುವ ಆನಂದ್ ಪಿರಾಮಲ್ ಇಸ್ವಾಸ್ಥ್ಯ ಮತ್ತು ಪಿರಾಮಲ್ ರಿಯಾಲಿಟಿ ಎಂಬ ಎರಡು ನವೋದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.
ಈ ಎರಡೂ ಸಂಸ್ಥೆಗಳು ಈಗ ಅವರ ಕುಟುಂಬದ 28,064.61 ಕೋಟಿ ರೂ. ವಹಿವಾಟು ಹೊಂದಿರುವ ಪಿರಾಮಲ್ ಎಂಟರ್ ಪ್ರೈಸಸ್ ನ ಭಾಗವಾಗಿವೆ. ಈ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ 40 ಸಾವಿರ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ತಂದೆ ಅಜಯ್ ಪಿರಮಾಳ್ ವಿವಿಧ ಸಂಸ್ಥೆಗಳನ್ನು ಹೊಂದಿರುವ ಪಿರಾಮಲ್ ಸಮೂಹ ಸಂಸ್ಥೆಯ ಅಧ್ಯಕ್ಷರು. ಆನಂದ್ ಇದರ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ.
ಮನಶಾಸ್ತ್ರದ ಪದವೀಧರೆಯಾಗಿರುವ ಇಶಾ, ಯೇಲ್ ವಿಶ್ವವಿದ್ಯಾಲಯದಲ್ಲಿ ಸೌತ್ ಏಷ್ಯನ್ ಸ್ಟಡೀಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಅವರು ಸ್ಟಾನ್ಫೋರ್ಡ್ನ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಬಿಜಿನೆಸ್ನಲ್ಲಿ ವಾಣಿಜ್ಯ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರಿಟೇಲ್ನ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದಾರೆ.

ಒಂದು ತಿಂಗಳ ಹಿಂದೆ ಮುಖೇಶ್ ಅಂಬಾನಿಯವರ ಜೇಷ್ಠ ಪುತ್ರ ಆಕಾಶ್ ಅಂಬಾನಿಯ ನಿಶ್ಚಿತಾರ್ಥ ಶ್ಲೋಕಾ ಮೆಹ್ತಾರೊಂದಿಗೆ ನೆರವೇರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


