ದೇಶ

5 ವರ್ಷಕ್ಕೆ ಬಿಜೆಪಿ 3 ಸಿಎಂಗಳನ್ನು ನೀಡಿದ್ದನ್ನು ಕರ್ನಾಟಕ ಮತದಾರರು ಮರೆಯಬಾರದು: ಚಿದಂಬರಂ

2008 ರಲ್ಲಿ ಸ್ಪಷ್ಟ ಬಹುಮತವಿದ್ದರೂ ಬಿಜೆಪಿ 5 ವರ್ಷಗಳ ಅವಧಿಯಲ್ಲಿ ಮೂರು ಸಿಎಂಗಳನ್ನು ನೀಡಿದ್ದನ್ನ ಕರ್ನಾಟಕ ಮತದಾರರು ಮರೆಯಬಾರದು ಎಂದು...

5 ವರ್ಷಕ್ಕೆ ಬಿಜೆಪಿ 3 ಸಿಎಂಗಳನ್ನು ನೀಡಿದ್ದನ್ನು ಕರ್ನಾಟಕ ಮತದಾರರು ಮರೆಯಬಾರದು: ಚಿದಂಬರಂ
ಪಿ.ಚಿದಂಬರಂ
Published On :
ನವದೆಹಲಿ: 2008 ರಲ್ಲಿ ಸ್ಪಷ್ಟ ಬಹುಮತವಿದ್ದರೂ ಬಿಜೆಪಿ 5 ವರ್ಷಗಳ ಅವಧಿಯಲ್ಲಿ ಮೂರು ಸಿಎಂಗಳನ್ನು ನೀಡಿದ್ದನ್ನ ಕರ್ನಾಟಕ ಮತದಾರರು ಮರೆಯಬಾರದು ಎಂದು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು,ಕರ್ನಾಟಕ ಮತದಾರರು ಐದು ವರ್ಷಗಳ ಕಾಂಗ್ರೆಸ್ ನ ಸ್ಥಿರ ಆಡಳಿತ ಮತ್ತು 5 ವರ್ಷದಲ್ಲಿ ಮೂರು ಸಿಎಂಗಳನ್ನು ಕೊಟ್ಟ ಕೇಸರಿ ಪಕ್ಷದ ಆಡಳಿತವನ್ನು ಜನರು ಹೋಲಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
2008 ರಲ್ಲಿ ಕರ್ನಾಟಕ ಜನತೆ ಬಿಜೆಪಿ ಬಹುಮತ ನೀಡಿದ್ದರು 110  ಸೀಟು ಪಡೆದಿದ್ದರು. ಪೂರ್ಣ ಪ್ರಮಾಣದ ಬಹುಮತ ಪಡೆದು ಸರ್ಕಾರ ರಚಿಸಿದ್ದ ಬಿಜೆಪಿ ಸ್ಥಿರ ಆಡಳಿತ ನೀಡಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬಿಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.