ದೇಶ

ದಲಿತರನ್ನು ಶುದ್ದಿಗೊಳಿಸುವ ಶ್ರೀರಾಮ ನಾನಲ್ಲ: ವಿವಾದಿತ ಹೇಳಿಕೆಗೆ ಕ್ಷಮೆ ಯಾಚಿಸಿದ ಉಮಾ ಭಾರತಿ

ದಲಿತರೊಡನೆ ಸಹಭೋಜನ ಮಾಡಿ ಅವರನ್ನು ಪರಿಶುದ್ದಗೊಳಿಸಲು ನಾನು ಶ್ರೀರಾಮನಲ್ಲ ಎಂದಿದ್ದ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ತಮ್ಮ ಹೇಳಿಕೆ....

ದಲಿತರನ್ನು ಶುದ್ದಿಗೊಳಿಸುವ ಶ್ರೀರಾಮ ನಾನಲ್ಲ: ವಿವಾದಿತ ಹೇಳಿಕೆಗೆ ಕ್ಷಮೆ ಯಾಚಿಸಿದ ಉಮಾ ಭಾರತಿ
ಉಮಾ ಭಾರತಿ
Published On :
ಛತ್ತರ್‌ಪುರ ದಲಿತರೊಡನೆ ಸಹಭೋಜನ ಮಾಡಿ ಅವರನ್ನು ಪರಿಶುದ್ದಗೊಳಿಸಲು ನಾನು ಶ್ರೀರಾಮನಲ್ಲ ಎಂದಿದ್ದ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ತಮ್ಮ ಹೇಳಿಕೆ ವಿವಾದಕ್ಕೀಡಾಗಲಿದೆ ಎನ್ನುವುದನ್ನು ಅರಿತೊಡನೆ ಕ್ಷಮೆ ಯಾಚಿಸಿದ್ದಾರೆ.
"ದಲಿತರೊಡನೆ ಸಹಭೋಜನ ಕಾರ್ಯಕ್ರಮವಿದೆ ಎನ್ನುವುದು ನನಗೆ ತಿಳಿದಿರಲಿಲ್ಲ" ಉಮಾ ಭಾರತಿ ಹೇಳಿದಾರೆ. ಎರಡು ದಿನಗಳ ಅವಧಿಯ ಕಾರ್ಯಕ್ರಮಕ್ಕಾಗಿ ದಾದ್ರಿಗೆ ಆಗಮಿಸಿದ್ದ ಉಮಾ ಭಾರತಿ ಮೊದಲು ಈ ಕಾರ್ಯಕ್ರಮದಲ್ಲಿ ಬಾಗವಹಿಸಲು ಒಪ್ಪಿಕೊಂಡಿರಲಿಲ್ಲ.
ಛತ್ತರ್‌ಪುರ ಗ್ರಾಮದಲ್ಲಿ ಮಾತನಾಡಿದ ಅವರು "ನಾನು ಊಟಕ್ಕಾಗಿ ದಲಿತರ ಮನೆಗೆ ತೆರಳುವುದಿಲ್ಲ. ಆದರೆ ಹಾಗೆ ದಲಿತರ ಮನೆಗೆ ತೆರಳಿ ಆಹಾರ ಸ್ವೀಕರಿಸುವುದನ್ನು ನಾನು ಬೆಂಬಲಿಸುವೆನು. ನಾನು ಅವರ ಮನೆಗೆ ತೆರಳುವ ಬದಲು ಅವರನ್ನೇ ನನ್ನ ಮನೆಗೆ ಕರೆಯುತ್ತೇನೆ, ಅವರೊಡನೆ ಊಟ್ ಮಾಡುತ್ತೇನೆ" ಎಂದರು.
"ನಾನು ನಿಮ್ಮೊಡನೆ ರಹಸ್ಯವೊಂದನ್ನು ಹಂಚಿಕೊಳ್ಳುವೆ, ನಾನು ಸಹಭೋಜನ ಅಥವಾ ಸಮುದಾಯ ಭೋಜನವನ್ನು ಒಪ್ಪುವುದಿಲ್ಲ. ಶಬರಿ ಮನೆಗೆ ರಾಮ ತೆರಳಿದ ಎನ್ನುವುದನ್ನು ಹಾಗೂ ಅದರಿಂದ ಶಬರಿ ಪರಿಶುದ್ದರಾಗುತ್ತಾರೆ ಎನ್ನುವುದನ್ನೂ ವೈಯುಕ್ತಿಕವಾಗಿ ನಾನು ನಂಬುವುದಿಲ್ಲ" ಅವರು ಹೇಳಿದರು.
ಕಳೆದ ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಬಾರತಿ ದಲಿತ ಸಮುದಾಯದೊಡನೆ ಊಟ ಸ್ವೀಕರಿಸುವುದರಿಂದ ತಪ್ಪಿಸಿಕೊಂಡಿದ್ದರು. ಅಲ್ಲದೆ ದಲಿತರಿಂದ ಆಹಾರ ಸ್ವೀಕರಿಸಿ ಅವರನ್ನು ಪರಿಶುದ್ದಗೊಳಿಸಲು ನಾನು ಶ್ರೀರಾಮನಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕಳೆದ ಕೆಲ ತಿಂಗಳಿನಿಂದ ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಾಮಾಜಿಕ ಸಾಮರಸ್ಯ ಸಾರುವ ಸಲುವಾಗಿ ದಲಿತರೊಂದಿಗೆ ಸಹಭೋಜನ ಆಯೋಜನೆಗೆ ಪ್ರೇರೇಪಿಸುತ್ತಿದೆ. . 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.