ನರೇಂದ್ರ ಮೋದಿ ರಿಪೋರ್ಟ್ ಕಾರ್ಡ್ ಗೆ 'ಎಫ್ ಗ್ರೇಡ್' ನೀಡಿದ ರಾಹುಲ್ ಗಾಂಧಿ
ಕರ್ನಾಟಕದ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂಬ ಬಗ್ಗೆ ರಿಪೋರ್ಟ್ ಕಾರ್ಡನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

Published On :
ನವದೆಹಲಿ: ಕರ್ನಾಟಕದ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು ಎಂಬ ಬಗ್ಗೆ ರಿಪೋರ್ಟ್ ಕಾರ್ಡನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಟ್ವಿಟರ್‌ನಲ್ಲಿ ನೀಡಿದ್ದಾರೆ.
ಕರ್ನಾಟಕ ಕೃಷಿ ವಲಯಕ್ಕೆ ಮೋದಿ ನೀಡಿರುವ ಕೊಡುಗೆಗಳಿಗೆ ರಾಹುಲ್ ಕಳಪೆ 'ಎಫ್ ಗ್ರೇಡ್ ಕೊಟ್ಟಿದ್ದಾರೆ.
ರಾಹುಲ್ ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ : ಪ್ರಧಾನಿ ಮೋದಿ ಅವರ ರಿಪೋರ್ಟ್ ಕಾರ್ಡ್ - ರಾಜ್ಯ ಕರ್ನಾಟಕ; ವಿಷಯ: ಕೃಷಿ.
1. ಕರ್ನಾಟಕ ಸರಕಾರ ಮಂಜೂರು ಮಾಡಿರುವ 8,500 ಕೋಟಿ ರೂ. ಕೃಷಿ ಸಾಲ ಮನ್ನಾಗೆ ಮೋದಿ ಕೊಡುಗೆ : ಶೂನ್ಯ ರೂಪಾಯಿ.
2. ಪ್ರಧಾನಿಯವರ ಕೃಷಿ ವಿಮೆ ಯೋಜನೆ: ರೈತರು ಸಂಕಷ್ಟದಲ್ಲಿ; ಖಾಸಗಿ ವಿಮಾ ಕಂಪೆನಿಗಳಿಗೆ ಲಾಭ.
3. ಕರ್ನಾಟಕ ರೈತರಿಗೆ ಎಂಎಸ್‌ಪಿ + 50% ಇಲ್ಲ : ಗ್ರೇಡ್ ಎಫ್.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ತಮ್ಮ ಮೂರನೇ ಸುತ್ತಿನ ಪ್ರಚಾರಾಭಿಯಾನಕ್ಕೆ ತೊಡಗಿ ಮುಂದಿನ ಕೆಲವೇ ದಿನಗಳಲ್ಲಿ 12 ರಾಲಿಗಳನ್ನು ನಡೆಸಿಕೊಡಲಿರುವಂತೆಯೇ ರಾಹುಲ್ ಅವರಿಂದ ಈ "ರಿಪೋರ್ಟ್ ಕಾರ್ಡ್' ಟ್ವಿಟರ್ ದಾಳಿ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿKarnatakaಕರ್ನಾಟಕRahul Gandhiರಾಹುಲ್ ಗಾಂಧಿreport cardರಿಪೋರ್ಟ್ ಕಾರ್ಡ್grade Fಗ್ರೇಡ್ ಎಫ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


