ಮೋದಿಯಿಂದ ಚಿನ್ನದ ಬಣ್ಣದ ಹೂ ಮಾಲೆ ಗಿಪ್ಟ್ ಪಡೆದ ಐಐಟಿ ವಿದ್ಯಾರ್ಥಿ
ಸಾಮಾಜಿಕ ಜಾಲತಾಣಗಳ ಐಐಟಿ ವಿದ್ಯಾರ್ಥಿಯೊಬ್ಬ ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಹೂ ಮಾಲೆಯನ್ನು ಗಿಪ್ಟ್ ಆಗಿ ನೀಡಿದ್ದಾರೆ.

ನವದೆಹಲಿ : ಸಾಮಾಜಿಕ ಜಾಲತಾಣಗಳ ಐಐಟಿ ವಿದ್ಯಾರ್ಥಿಯೊಬ್ಬ ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಹೂ ಮಾಲೆಯನ್ನು ಗಿಪ್ಟ್ ಆಗಿ ನೀಡಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಕಳೆದ ತಿಂಗಳು ಮಧ್ಯಪ್ರದೇಶದ ಸಾರ್ವಜನಿಕ ಸಮಾರಂಭವೊಂದರಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಹೂಮಾಲೆ ನೀಡುಂತೆ ಧಾನ್ ಬಾದ್ ನ ಐಐಟಿಯ ವಿದ್ಯಾರ್ಥಿ ರಾಬೀಸ್ ಕುಮಾರ್ ಸಿಂಗ್ ಮನವಿ ಮಾಡಿಕೊಂಡಿದ್ದರು.
ಪಂಚಾಯತ್ ರಾಜ್ ದಿನದಂದು ನಿಮ್ಮ ಭಾಷಣ ಕೇಳಿದೆ. ತುಂಬಾ ಚೆನ್ನಾಗಿ ಮಾತನಾಡ್ರಿ , ನೀವು ಧರಿಸಿದ ಚಿನ್ನದ ಬಣ್ಣದ ಹೂ ಮಾಲೆ ನನ್ನಗೆ ಇಷ್ಟವಾಗಿದ್ದು, ಅದನ್ನು ಕೊಡುವಂತೆ ಟ್ವೀಟರ್ ಮೂಲಕ ರಾಬೀಸ್ ಕುಮಾರ್ ಸಿಂಗ್ ಮನವಿ ಮಾಡಿಕೊಂಡಿದ್ದ.
ಆದಾದ ಮಾರನೇ ದಿನವೇ ನರೇಂದ್ರಮೋದಿ ಆ ಚಿನ್ನದ ಬಣ್ಣದ ಹೂ ಮಾಲೆಯನ್ನು ಪತ್ರದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಪಂಚಾಯತ್ ರಾಜ್ ದಿನದಿಂದ ನಾನು ಧರಿಸಿದ್ದ ಚಿನ್ನದ ಬಣ್ಣದ ಹೂ ಮಾಲೆ ನಿನ್ನಗೆ ಇಷ್ಟವಾಗಿರುವುದನ್ನು ತಿಳಿದಿದ್ದು, ಕಾಗದ ಪತ್ರದೊಂದಿಗೆ ಅದನ್ನು ಕಳುಹಿಸಲಾಗಿದೆ. ನಿನ್ನ ಭವಿಷ್ಯ ಚೆ್ನ್ನಾಗಿರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ಸಿಂಗ್ ಆ ಗಿಪ್ಟ್ ಪಡೆದಿದ್ದು, ನರೇಂದ್ರಮೋದಿಗೆ ಟ್ವೀಟ್ ಮೂಲಕವೇ ಕೃತಜ್ಞತೆ ಸಲ್ಲಿಸಿದ್ದಾರೆ. ಕಾಗದ ಪತ್ರದೊಂದಿಗೆ ಗಿಪ್ಟ್ ಪಡೆದಿದ್ದು, ಸುಂದರವಾದ ಬಹುಮಾನ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


