ದಲಿತರನ್ನು ಶುದ್ದೀಕರಿಸಲು ನಾನು ಭಗವಾನ್ ಶ್ರೀರಾಮನಲ್ಲ: ಕೇಂದ್ರ ಸಚಿವೆ ಉಮಾ ಭಾರತಿ
ಜೊತೆಯಲ್ಲಿ ಊಟ ಮಾಡಿದಾಕ್ಷಣ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿಯವರು ಮಂಗಳವಾರ ಹೇಳಿದ್ದಾರೆ...

Published On :
ಛತರ್ಪುರ: ಜೊತೆಯಲ್ಲಿ ಊಟ ಮಾಡಿದಾಕ್ಷಣ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿಯವರು ಮಂಗಳವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಉಮಾ ಭಾರತಿಯವರು, ಜೊತೆಗೆ ಊಟ ಮಾಡಿದ ಕೂಡಲೇ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀ ರಾಮ ಅಲ್ಲ. ದಲಿತರೇ ನಮ್ಮ ಮನೆಗೆ ಬಂದು ಜೊತೆಜೊತೆಗೆ ಆಹಾರ ಸೇವಿಸಿದರೆ, ಆಗ ಅವರು ಶುದ್ಧೀಕರಣಗೊಳ್ಳುತ್ತಾರೆಂದು ಹೇಳಿದ್ದಾರೆ.
ದಲಿತರು ನನ್ನ ಮನೆಗೆ ಬಂದಾಗ, ಅವರಿಗೆ ನನ್ನ ಕೈಗಳಿಂದ ಸೇವೆ ಮಾಡಿದರೆ ನನ್ನ ಮನೆಗೆ ಒಳ್ಳೆಯದಾಗುತ್ತದೆ. ನಮ್ಮ ಕೈಯಿಂದ ದಲಿತರಿಗೆ ಆಹಾರ ಕೊಟ್ಟಾಗ ದಲಿತರು ಸ್ವಯಂ ಶುದ್ಧಗೊಳ್ಳುತ್ತಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


