ದೇಶ

ಕೋಲ್ಕತ್ತಾ: ಮೆಟ್ರೋ ರೈಲಿನಲ್ಲಿ ನೈತಿಕ ಪೋಲೀಸ್ ಗಿರಿ, ಸಾರ್ವಜನಿಕರಿಂದ ಪ್ರತಿಭಟನೆ

ಕೋಲ್ಕತ್ತಾದ ಮೆಟ್ರೋ ರೈಲಿನಲ್ಲಿ ಜೋಡಿಯೊಂದು ತಬ್ಬಿಕೊಂಡ ಕಾರಣ ಕೋಪಗೊಂಡ ಸಹಪ್ರಯಾಣಿಕರು ಅವರನ್ನು ಥಳಿಸಿ ರೈಲಿನಿಂದ ಹೊರ ಹಾಕಿದ ಪ್ರಸಂಗ ಸೋಮವಾರ ನಡೆದಿತ್ತು

ಕೋಲ್ಕತ್ತಾ: ಮೆಟ್ರೋ ರೈಲಿನಲ್ಲಿ ನೈತಿಕ ಪೋಲೀಸ್ ಗಿರಿ, ಸಾರ್ವಜನಿಕರಿಂದ ಪ್ರತಿಭಟನೆ
ಕೋಲ್ಕತ್ತಾ: ಮೆಟ್ರೋ ರೈಲಿನಲ್ಲಿ ನೈತಿಕ ಪೋಲೀಸ್ ಗಿರಿ, ಸಾರ್ವಜನಿಕರಿಂದ ಪ್ರತಿಭಟನೆ
Published On :
ಕೋಲ್ಕತ್ತಾ: ಕೋಲ್ಕತ್ತಾದ ಮೆಟ್ರೋ ರೈಲಿನಲ್ಲಿ ಜೋಡಿಯೊಂದು ತಬ್ಬಿಕೊಂಡ ಕಾರಣ ಕೋಪಗೊಂಡ ಸಹಪ್ರಯಾಣಿಕರು ಅವರನ್ನು ಥಳಿಸಿ ರೈಲಿನಿಂದ ಹೊರ ಹಾಕಿದ ಪ್ರಸಂಗ ಸೋಮವಾರ ನಡೆದಿತ್ತು. ಹೀಗೆ ಜೋಡಿಯನ್ನು ಥಳಿಸಿದ ಕ್ರಮವನ್ನು ಖಂಡಿಸಿ ಮಂಗಳವಾರ ನಗರದ ಡಮ್ ಡಮ್ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
"ಸ್ವಾತಂತ್ರದ ನಿರೀಕ್ಷೆಯಲ್ಲಿ", "ನೈತಿಕ ಪೋಲೀಸ್ ಗಿರಿ ನಿಲ್ಲಿಸಿ" ಇಂತಹಾ ಸಂದೇಶವುಳ್ಳ ಫಲಕ ಹಿಡಿದಿದ್ದ ಪ್ರತಿಭಟನಾಕಾರರು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಜೋಡಿಯೊಂದು ತಬ್ಬಿಕೊಂಡಾಗ ಹಿರಿಯರಾದ ಸಹ ಪ್ರಯಾಣಿಕರು ಇದಕ್ಕೆ ಆಕ್ಷೇಪಿಸಿದರು. ಆಗ ಆ ಯುವಜೋಡಿ ಹಾಗೂ ಸಾರ್ವಜನಿಕರ ನಡುವೆ ಬಿರುಸಾದ ವಾಗ್ವಾದ ನಡೆಯಿತು. ಆಗ ಗುಂಪು ಸೇರಿದ ಸಾರ್ವಜನಿಕರು ಆ ಯುವಜೋಡಿಗೆ ಥಳಿಸಿದ್ದಲ್ಲದೆ ಮುಂದಿನ ನಿಲ್ದಾಣದಲ್ಲಿ ಅವರನ್ನು ಬಲವಂತವಾಗಿ ರೈಲಿನಿಂದ ಹೊರ ಕಳಿಸಿದ್ದರು.
ಘಟನೆ ಸಂಬಂಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ/
ಘಟನೆ ಕುರಿತ ಯಾವುದೇ ಸಿಸಿಟಿವಿ ತುಣುಕು ಲಭ್ಯವಾಗಿಲ್ಲ ಎಂದು ಮೆಟ್ರೋ ನಿಲ್ದಾಣದ ಅಧಿಕಾರಿಗಳು ಹೇಳಿದ್ದರೂ ಪ್ರತ್ಯಕ್ಷದರ್ಶಿಗಳು ಸೆರೆಹಿಡಿದ ಚಿತ್ರಗಳು ಮಾತ್ರ ಸಾಮಾಜಿಕ  ತಾಣಗಳಲ್ಲಿ ಹರಿದಾಡುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.