ಕಾರ್ಮಿಕರ ದಿನದಿಂದಲೇ ಕೇರಳದಲ್ಲಿ 'ನೋಕ್ಕು ಕೂಲಿ' ನಿಷೇಧ
ಉದ್ಯಮ ವಿರೋಧಿ ರಾಜ್ಯ ಎಂಬ ಹಣೆಪಟ್ಟಿಯಿಂದ ಹೊರಬರಲು ಕೇರಳ ಸರ್ಕಾರ ಮಂಗಳವಾರ ಮಹತ್ವದ ನಿರ್ಧಾರ....

Published On :
ತಿರುವನಂತಪುರಂ: ಉದ್ಯಮ ವಿರೋಧಿ ರಾಜ್ಯ ಎಂಬ ಹಣೆಪಟ್ಟಿಯಿಂದ ಹೊರಬರಲು ಕೇರಳ ಸರ್ಕಾರ ಮಂಗಳವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇಂದಿನಿಂದಲೇ ರಾಜ್ಯದಲ್ಲಿ 'ನೋಕ್ಕು ಕೂಲಿ'(ನೋಟದ ಕೂಲಿ) ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಸಂಬಂಧ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಸರ್ಕಾರ ನಿನ್ನೆ ರಾತ್ರಿಯೇ ಆದೇಶ ಹೊರಡಿಸಿದ್ದು, ಕಾರ್ಮಿಕರ ದಿನದಿಂದಲೇ 'ನೋಕ್ಕು ಕೂಲಿ' ನಿಷೇಧ ಜಾರಿಗೆ ಬಂದಿದೆ.
ಮಾರ್ಚ್ 8ರಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ನೋಕ್ಕು ಕೂಲಿ' ಎಂದರೆ 'ನೋಟಕ್ಕೆ ಕೂಲಿ' ಎಂದರ್ಥ. ಯಾವುದೇ ಕೆಲಸ ಮಾಡದೇ ಇದ್ದರೂ ಕೂಲಿ ಪಡೆಯುವುದು. ಉದಾಹರಣೆಗೆ, ಸಾಮಾನುಗಳನ್ನು ಹೇರಿಕೊಂಡು ಲಾರಿಯೊಂದು ಬಂದರೆ, ಅದರ ಮಾಲೀಕ ತನ್ನ ಕಾರ್ಮಿಕರಿಂದ ಅದನ್ನು ಇಳಿಸುವಂತಿಲ್ಲ. ಟ್ರೇಡ್ ಯೂನಿಯನ್ ಗಳ ಸದಸ್ಯರಿಂದಲೇ ಅದನ್ನು ಅನ್ ಲೋಡ್ ಮಾಡಿಸಬೇಕು. ಅದಕ್ಕವರು ಕೇಳುವ ಕೂಲಿ ಕೊಡಲೇಬೇಕು. ಒಂದು ವೇಳೆ ಮಾಲೀಕ ತನ್ನದೇ ಕಾರ್ಮಿಕರ ಸಹಾಯದಿಂದ ಅದನ್ನು ಇಳಿಸಿದಲ್ಲಿ ಅದನ್ನು ನೋಡುತ್ತ ನಿಲ್ಲುವ ಟ್ರೇಡ್ ಯೂನಿಯನ್ ಗಳಿಗೆ ಅವರು ಹೇಳಿದಷ್ಟು ಹಣವನ್ನು ಸಂದಾಯ ಮಾಡಲೇಬೇಕಾಗಿತ್ತು. ಇಂದಿನಿಂದ ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ.
2011ರಲ್ಲೇ ಕೇರಳ 'ನೋಕ್ಕು ಕೂಲಿ' ಮುಕ್ತ ರಾಜ್ಯ ಎಂದು ಘೋಷಿಸಲ್ಪಟ್ಟಿದ್ದರೂ ಅದು ಕೇವಲ ಕಡತಗಳಲ್ಲಿ ಮಾತ್ರ ಉಳಿದಿತ್ತು. ಹೈಕೋರ್ಟ್ ಮಧ್ಯಪ್ರವೇಶಿಸಿದರೂ ಆ ಅರ್ಥಹೀನ ಪದ್ಧತಿ ಮುಂದುವರಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


