ದೇಶ

39 ಭಾರತೀಯರ ಮೃತದೇಹಗಳನ್ನು ಮರಳಿ ತರಲು ಇರಾಕ್ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ: ವಿಕೆ ಸಿಂಗ್

ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೀಡಾಗಿದ್ದ 39 ಭಾರತೀಯ ಅವಶೇಷಗಳನ್ನು ಮರಳಿ ತರಲು ಇರಾಕ್ ಸರ್ಕಾರ ಒಪ್ಪಿಗಾಗಿ ಕಾಯುತ್ತಿದ್ದೇವೆಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಶನಿವಾರ ಹೇಳಿದ್ದಾರೆ...

39 ಭಾರತೀಯರ ಮೃತದೇಹಗಳನ್ನು ಮರಳಿ ತರಲು ಇರಾಕ್ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ: ವಿಕೆ ಸಿಂಗ್
ವಿದೇಶಾಂಗ ಖಾತೆಗಳ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್
Published On :
ನವದೆಹಲಿ: ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೀಡಾಗಿದ್ದ 39 ಭಾರತೀಯ ಮೃತದೇಹಗಳನ್ನು ಮರಳಿ ತರಲು ಇರಾಕ್ ಸರ್ಕಾರ ಒಪ್ಪಿಗಾಗಿ ಕಾಯುತ್ತಿದ್ದೇವೆಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಶನಿವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, 39 ಭಾರತೀಯ ಮೃತದೇಹಗಳ ಹಸ್ತಾಂತರ ಕುರಿತಂತೆ ಕಾನೂನಾತ್ಮಕ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಮೃತದೇಹಗಳನ್ನು ಭಾರತಕ್ಕೆ ತರಲು ನವದೆಹಲಿ ಬಾಗ್ದಾದ್ ನ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ. 
39 ಭಾರತೀಯರ ಅವಶೇಷಗಳ ಕುರಿತ ಕಾನೂನಾತ್ಮಕ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದು, ನವದೆಹಲಿ ಇದೀಗ ಬಾಗ್ದಾದ್ ಒಪ್ಪಿಗೆಗಾಗಿ ಕಾಯುತ್ತಿದೆ. ಬಾಗ್ದಾದ್ ರಾಯಭಾರಿಗಳು ಒಪ್ಪಿಗೆ ನೀಡುತ್ತಿದ್ದಂತೆಯೇ ಸಿ-17 ವಿಮಾನದ ಮೂಲಕ ಇರಾಕ್ ತೆರಳಿ ಅವಶೇಷಗಳನ್ನು ಭಾರತಕ್ಕೆ ತರಲಾಗುತ್ತದೆ. ನಂತರ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೃತರ ಕುಟುಂಬಸ್ಥರು ವಿಮಾನ ನಿಲ್ದಾಣಕ್ಕೆ ಬರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 
ಬಾಗ್ದಾದ್'ಗೆ ತೆರಳಿ ಅವಶೇಷಗಳನ್ನು ಪಡೆದುಕೊಂಡ ಬಳಿಕ ಅಲ್ಲಿಂದ ಅಮೃತಸರ ಹಾಗೂ ಹಿಮಾಚಲಪ್ರದೇಶ, ಕೋಲ್ಕತಾ, ಪಾಟ್ನಾಗೆ ತೆರಳಿ ಮೃತರ ಕುಟಂಬಸ್ಥರಿಗೆ ಅವಶೇಷಗಳನ್ನು ಹಸ್ತಾಂತರ ಮಾಡಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.