ಕಾರು ನಿಲ್ಲಿಸಲು ಬಂದ ಪೊಲೀಸ್ ಮೇಲೆಯೇ ಕಾರು ಹತ್ತಿಸಿದ ಟಿಡಿಪಿ ನಾಯಕನ ಪುತ್ರ
ಬ್ಯಾರಿಕೇಡ್ ಮೂಲಕ ಕಾರು ನಿಲ್ಲಿಸಲು ಬಂದ ಪೊಲೀಸ್ ಮೇಲೆಯೇ ಟಿಡಿಪಿ ನಾಯಕನ ಪುತ್ರನೊಬ್ಬ ಕಾರು ಹತ್ತಿರುವ ಘಟನೆ ಕಾಕಿನಾಡ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿ ಬಳಿ ನಡೆದಿದೆ...

Published On :
ಕಾಕಿನಾಡ: ಬ್ಯಾರಿಕೇಡ್ ಮೂಲಕ ಕಾರು ನಿಲ್ಲಿಸಲು ಬಂದ ಪೊಲೀಸ್ ಮೇಲೆಯೇ ಟಿಡಿಪಿ ನಾಯಕನ ಪುತ್ರನೊಬ್ಬ ಕಾರು ಹತ್ತಿರುವ ಘಟನೆ ಕಾಕಿನಾಡ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿ ಬಳಿ ನಡೆದಿದೆ.
ಕಳೆದ ಭಾನುವಾರ ಘಟನೆ ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕಾಲೇಜು ವಿದ್ಯಾರ್ಥಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ಸಿದ್ಧ ಶ್ರೀನಿವಾಸ್ ಎಂದು ಹೇಳಲಾಗುತ್ತಿದೆ. ಈಗ ಕಾಕಿನಕಾಡದಲ್ಲಿರುವ ಆದಿತ್ಯಾ ಇಂಜಿನಿಯರಿಂಗ ಕಾಲೇಜಿನಲ್ಲಿ 3ನೇ ವರ್ಷದ ಬಿ.ಟೆಕ್ ಪದವಿ ಮಾಡುತ್ತಿದ್ದು, ಈತನ ತಂದೆ ಸಿದ್ಧ ಸತ್ಯನಾರಾಯಣ ಅವರು ಟಿಡಿಪಿ ನಾಯಕನ ಪುತ್ರನಾಗಿದ್ದಾನೆ.
ಆರೋಪಿ ಶ್ರೀನಿವಾಸ್ ಮದುವೆ ಸಮಾರಂಭಕ್ಕೆ ಹೋಗಿ ಹಿಂತಿರುಗಿ ಬರುತ್ತಿದ್ದ. ಕಾಕಿನಾಡ ನಗರದ ಸಿನಿಮಾ ರಸ್ತೆಯಲ್ಲಿ ಶ್ರೀನಿವಾಸ್ ಕಾರಿನಲ್ಲಿ ವೇಗವಾಗಿ ಬರುತ್ತಿದ್ದ. ಈ ವೇಳೆ ನಿಧಾನಗತಿಯಲ್ಲಿ ಕಾರು ಚಲಾಯಿಸುವಂತೆ ಪೊಲೀಸ್ ಸನ್ಹೆ ಮಾಡಿದ್ದಾರೆ. ಆದರೂ. ಶ್ರೀನಿವಾಸ್ ವೇಗವಾಗಿ ಬರುತ್ತಿರುವುದನ್ನು ನೋಡಿ ಮುಂದಿನ ಸಿಗ್ನಲ್ ನಲ್ಲಿದ್ದ ಪೊಲೀಸರಿಗೆ ವಾಕಿ-ಟಾಕಿ ಮೂಲಕ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಪಿವಿವಿ ಸತ್ಯಪ್ರಸಾದ್ ಎಂಬುವವರು ಬ್ಯಾರಿಕೇಡ್ ಮೂಲಕ ಕಾರನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ, ಶ್ರೀನಿವಾಸ್ ಪೊಲೀಸ್ ಸತ್ಯಪ್ರಸಾದ್ ಅವರ ಮೇಲೆಯೇ ಕಾರನ್ನು ಹತ್ತಿಸಿದ್ದಾರೆ. ಸ್ಥಳದಲ್ಲಿದ್ದ ಮತ್ತಿಬ್ಬರು ಪೊಲೀಸರು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿನ್ನು ಥೊಂಡಾಂಗಿ ಗ್ರಾಮದಲ್ಲಿ ಬಂಧನಕ್ಕೊಳಪಡಿಸಲಾಯಿತು. ಘಟನೆ ವೇಳೆ ಶ್ರೀನಿವಾಸ್ ಕಂಠಪೂರ್ತಿ ಕುಡಿದಿದ್ದ. ಕಾರಿನಲ್ಲಿ ನಾಲ್ವರು ಮಹಿಳೆಯರೊಂದಿಗೆ ಹೋಗುತ್ತಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ, ಕಾರಿನಲ್ಲಿದ್ದ ಮಹಿಳೆಯರ ಕುರಿತಂತೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಪ್ರಸ್ತುತ ಸಿದ್ಧ ಶ್ರೀನಿವಾಸ್ ವಿರುದ್ಧ ಭಾರತೀಯ ದಂಡ ಸಂಹಿತೆ 307,332 ಮತ್ತು 335ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಬಂಧನಕ್ಕೊಳಪಡಿಸಿದ ಬಳಿಕ ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ.
ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಸತ್ಯಪ್ರಸಾದ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


