ದೇಶ

ಏ.1 ರಿಂದ ಜಾರಿಗೆ ಬರಲಿರುವ ಇ-ವೇ ಬಿಲ್ ಕುರಿತ ಸಂದೇಹಗಳಿಗೆ ಕೇಂದ್ರದಿಂದ ಸ್ಪಷ್ಟನೆ

ಏ.1 ರಿಂದ ಜಾರಿಗೆ ಬರಲಿರುವ ಸಿಂಗಲ್ ಎಲೆಕ್ಟ್ರಿಕ್ ವೇ (ಇ-ವೇ) ಬಿಲ್ ಬಗ್ಗೆ ಇದ್ದ ಸಂದೇಹಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ತಲುಪಬೇಕಾದ ಪ್ರದೇಶದ ನಡುವಿನ ಪ್ರಯಾಣದಲ್ಲಿನ ವಿರಾಮದ ಅವಧಿಗೂ...

ಏ.1 ರಿಂದ ಜಾರಿಗೆ ಬರಲಿರುವ ಇ-ವೇ ಬಿಲ್ ಕುರಿತ ಸಂದೇಹಗಳಿಗೆ ಕೇಂದ್ರದಿಂದ ಸ್ಪಷ್ಟನೆ
ಇ-ವೇ ಬಿಲ್
Published On :
ನವದೆಹಲಿ: ಏ.1 ರಿಂದ ಜಾರಿಗೆ ಬರಲಿರುವ ಸಿಂಗಲ್ ಎಲೆಕ್ಟ್ರಿಕ್ ವೇ (ಇ-ವೇ) ಬಿಲ್ ಬಗ್ಗೆ ಇದ್ದ ಸಂದೇಹಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ತಲುಪಬೇಕಾದ ಪ್ರದೇಶದ ನಡುವಿನ ಪ್ರಯಾಣದಲ್ಲಿನ ವಿರಾಮದ ಅವಧಿಗೂ ಅನ್ವಯವಾಗಲಿದೆ ಎಂದು ಹೇಳಿದೆ. 
ತಲುಪಬೇಕಿರುವ ಮಾರ್ಗದ ನಡುವೆ ತೆಗೆದುಕೊಳ್ಳುವ ವಿರಾಮದ ಅವಧಿಗೂ ಅನ್ವಯವಾಗುವುದರ ಜೊತೆಗೆ ಒಂದಕ್ಕಿಂತ ಹೆಚ್ಚು ಸರಕು ಸಾಗಣೆ ಸಾರಿಗೆಗಳಿಗೂ ನೂತನ ಇ-ವೇ ಬಿಲ್ ವ್ಯವಸ್ಥೆ ಸಹಕಾರಿಯಾಗಿರಲಿದೆ ಎಂದು ಸರ್ಕಾರ ತಿಳಿಸಿದೆ. 
ಸರಕು ಸಾಗಣೆಗೆ ಸಂಬಂಧಿಸಿದಂತೆ ಅಂತಾರಾಜ್ಯ ಸಾರಿಗೆ ಹಾಗೂ ಆಂತರಿಕವಾಗಿ ಹೊಸ ವ್ಯವಸ್ಥೆ ಇನ್ನೆರಡು ವಾರಗಳಲ್ಲಿ ಅನ್ವಯವಾಗಲಿದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಹಸ್ಮುಕ್  ಆಧಿಯಾ ಹೇಳಿದ್ದಾರೆ. 
ಇಬ್ಬರು ಸಾಗಣೆದಾರರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವಾಗ ತಲುಪಬೇಕಿರುವ ಪ್ರದೇಶದ ನಡುವೆ ಮತ್ತೊಂದು ನಗರ ಪ್ರವೇಶಿಸುವುದಕ್ಕೆ ಒಂದೇ ಇ-ವೇ ಬಿಲ್ ಬೇಕಾಗುತ್ತದೆ. ಈ ರೀತಿಯ ಪರಿಸ್ಥಿತಿಗಳಲ್ಲಿ ಸಾಗಣೆ ಮಾಡುತ್ತಿರುವ ಮೊದಲ ವ್ಯಕ್ತಿ ಸಾಗಣೆ ಮಾಡುತ್ತಿರುವ ಎರಡನೇ ವ್ಯಕ್ತಿಯೊಂದಿಗೆ ಇ-ವೇ ಬಿಲ್ ನ್ನು ಹಂಚಿಕೊಳ್ಳುತ್ತಾನೆ ಇದರಲ್ಲಿ ಎರಡನೇ ವ್ಯಕ್ತಿ ತನ್ನ ವಾಹನದಲ್ಲಿರುವ ಸರಕುಗಳ ಬಗ್ಗೆ ಮಾಹಿತಿ ಸಲ್ಲಿಸಲಿದ್ದಾನೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.