ದೇಶ

ದೆಹಲಿ: ತಪ್ಪಾಗಿ ಬೇರೆ ನಿಲ್ದಾಣ ತಲುಪಿದ ರೈಲು, ಕಕ್ಕಾಬಿಕ್ಕಿಯಾದ ಪ್ರಯಾಣಿಕರು

ನ್ಯೂ ಡೆಲ್ಲಿ ನಿಲ್ದಾಣಕ್ಕೆ ಹೋಗಬೇಕಿದ್ದು ಪ್ರಯಾಣಿಕರ ರೈಲು ತಪ್ಪಾಗಿ ಹಳೆಯ ರೈಲ್ವೆ ನಿಲ್ದಾಣಕ್ಕೆ ತಲುಪಿದ ಅಪರೂಪದ ಘಟನೆ ನಡೆಸಿದ್ದು ತಾವು ಹೋಗಬೇಕಾದ ರೈಲ್ವೆ ನಿಲ್ದಾಣ...

ದೆಹಲಿ: ತಪ್ಪಾಗಿ ಬೇರೆ ನಿಲ್ದಾಣ ತಲುಪಿದ ರೈಲು, ಕಕ್ಕಾಬಿಕ್ಕಿಯಾದ ಪ್ರಯಾಣಿಕರು
ರೈಲು
Published On :
ನವದೆಹಲಿ: ನ್ಯೂ ಡೆಲ್ಲಿ ನಿಲ್ದಾಣಕ್ಕೆ ಹೋಗಬೇಕಿದ್ದು ಪ್ರಯಾಣಿಕರ ರೈಲು ತಪ್ಪಾಗಿ ಹಳೆಯ ರೈಲ್ವೆ ನಿಲ್ದಾಣಕ್ಕೆ ತಲುಪಿದ ಅಪರೂಪದ ಘಟನೆ ನಡೆಸಿದ್ದು ತಾವು ಹೋಗಬೇಕಾದ ರೈಲ್ವೆ ನಿಲ್ದಾಣ ಇದಲ್ಲ ಎಂದು ಪ್ರಯಾಣಿಕರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. 
ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಈ ಸಂಬಂಧ ರೈಲ್ವೆ ಅಧಿಕಾರಿ ಅಸ್ಲಾಂ ಎಂಬುವರನ್ನು ಅಮಾನತು ಮಾಡಲಾಗಿದೆ. ಪಾಣಿಪತ್-ನ್ಯೂ ಡೆಲ್ಲಿ ಮತ್ತು ಸೋನಿಪತ್-ಓಲ್ಡ್ ಡೆಲ್ಲಿ ರೈಲುಗಳಿಂದ ಗೊಂದಲಕ್ಕೊಳಗಾಗಿ ಈ ಮಾರ್ಗವನ್ನು ಬದಲಿಸಿದ್ದಾರೆ ಎಂದು ತಿಳಿದುಬಂದಿದೆ. 
ಬೆಳಗ್ಗೆ 7.38ರ ಸುಮಾರಿಗೆ ಎರಡು ರೈಲುಗಳು ಸದಾರ್ ಬಜಾರ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದವು. ಈ ಎರಡು ರೈಲುಗಳ ಆಗಮನದ ಸಮಯ ಒಂದೇ ಆಗಿದ್ದರಿಂದ ಇದರಿಂದ ಗೊಂದಲಕ್ಕೀಡಾಗಿ ಈ ಘಟನೆ ನಡೆದಿದೆ ಎಂದು ಉತ್ತರ ರೈಲ್ವೆ ವಕ್ತಾರ ನಿತೀನ್ ಚೌಧರಿ ತಿಳಿಸಿದ್ದಾರೆ. 
ತಪ್ಪಿನ ಅರಿವಾಗುತ್ತಿದ್ದಂತೆ ರೈಲನ್ನು ಮತ್ತೆ ನ್ಯೂ ಡೆಲ್ಲಿ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಇನ್ನು ದೆಹಲಿಯಲ್ಲಿ ನಡೆದ ಅಪರೂಪದ ಘಟನೆ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.