ದೇಶ

ಮಧ್ಯಪ್ರದೇಶ: ಅಕ್ರಮ ಮರಳು ಸಾಗಣೆ ವರದಿ ಮಾಡಿದ್ದ ಪತ್ರಕರ್ತ ನಿಗೂಢ ಸಾವು, ಎಸ್ ಐಟಿ ತನಿಖೆಗೆ ಶಿಫಾರಸು

ಮಧ್ಯ ಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ ಪ್ರಕರಣದ ತನಿಖಾ ವರದಿ ಪ್ರಕಟಿಸುತ್ತಿದ್ದ ರಾಷ್ಟ್ರೀಯ ಸುದ್ದಿ ವಾಹಿನಿಯ ಪತ್ರಕರ್ತ ಸಂದೀಪ್‌ ಶರ್ಮ.........

ಮಧ್ಯಪ್ರದೇಶ: ಅಕ್ರಮ ಮರಳು ಸಾಗಣೆ ವರದಿ ಮಾಡಿದ್ದ ಪತ್ರಕರ್ತ ನಿಗೂಢ ಸಾವು, ಎಸ್ ಐಟಿ ತನಿಖೆಗೆ ಶಿಫಾರಸು
ಸಂದೀಪ್ ಶರ್ಮಾ
Published On :
ಬಿಂಡ್(ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಣೆ ಪ್ರಕರಣದ ತನಿಖಾ ವರದಿ ಪ್ರಕಟಿಸುತ್ತಿದ್ದ ರಾಷ್ಟ್ರೀಯ ಸುದ್ದಿ ವಾಹಿನಿಯ ಪತ್ರಕರ್ತ ಸಂದೀಪ್‌ ಶರ್ಮಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಸೋಮವಾರ ಬೆಳಗಿನ ಜಾವ ಸಂದೀಪ್ ಮೇಲೆ ಟ್ರಕ್‌ವೊಂದು ಅನುಮಾನಾಸ್ಪದವಾಗಿ ಹರಿದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಅಕ್ರಮ ಮರಳು ದಂಧೆಗಳಲ್ಲಿ ರಾಜ್ಯದ ಪೋಲೀಸ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದ ಸಂದೀಪ್ ಈ ಕುರಿತಾದ ವರದಿಯೊಂದನ್ನು ತಯಾರು ಮಾಡಿದ್ದರು. ಅದರಲ್ಲಿ  ಪೋಲೀಸ್ ಅಧಿಕಾರಿ ಅಕ್ರಮದಲ್ಲಿ ತೊಡಗಿರುವ ಕುರಿತಂತೆ  ಫೋನ್‌ ಸಂಭಾಷಣೆ ದಾಖಲೆಗಳಿದ್ದವು. ಸುದ್ದಿ ವಾಹಿನಿಯಲ್ಲಿ ಆ ವರದಿ ಪ್ರಸಾರವಾದ ಬಳಿಕ ಪೋಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಗಿತ್ತು. 
ಸುದ್ದಿ ಪ್ರಸಾರಗೊಂಡ ಬಳಿಕ ತನಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ಸಂದೀಪ್ ದೂರು ನೀಡಿದ್ದರು.
ಇದೀಗ ಪತ್ರಕರ್ತ ಸಂದೀಪ್ ಶರ್ಮಾ ಸಾವನ್ನಪ್ಪಿದ್ದು ಇವರ ಸಾವಿನ ತನಿಖೆ ನಡೆಸಲು ಮಧ್ಯ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು(ಎಸ್ ಐಟಿ) ರಚನೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.