ದೇಶ

ಅಣ್ಣಾ ಹಜಾರೆ ಹೋರಾಟಕ್ಕೆ ನಾಲ್ಕು ದಿನ : ನಾಲ್ಕು ಕೆಜಿ ತೂಕ ಕಡಿಮೆ

ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದು, ದೇಹದ ತೂಕದ ಪ್ರಮಾಣದಲ್ಲಿ ನಾಲ್ಕು ಕೆಜಿ ಕಡಿಮೆಯಾಗಿದೆ.

ಅಣ್ಣಾ ಹಜಾರೆ ಹೋರಾಟಕ್ಕೆ ನಾಲ್ಕು ದಿನ  : ನಾಲ್ಕು ಕೆಜಿ ತೂಕ ಕಡಿಮೆ
ಅಣ್ಣಾ ಹಜಾರೆ
Published On :

ನವದೆಹಲಿ : ಕೇಂದ್ರದಲ್ಲಿ ಲೋಕಾಪಾಲ್ , ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದು, ದೇಹದ ತೂಕದ ಪ್ರಮಾಣದಲ್ಲಿ ನಾಲ್ಕು ಕೆಜಿ ಕಡಿಮೆಯಾಗಿದೆ.

 ಆದಾಗ್ಯೂ, ಅವರ ರಕ್ತದೊತ್ತಡ ಪ್ರಮಾಣ ಸಾಮಾನ್ಯವಾಗಿದೆ ಎಂದು ಅವರ ಆಪ್ತ ದತ್ತಾ ಅವಾರಿ ತಿಳಿಸಿದ್ದಾರೆ.

ಕೇಂದ್ರದಲ್ಲಿ ಲೋಕಾಪಾಲ  ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಣ್ಣಾ ಹಜಾರೆ ಮಾರ್ಚ್ 23 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಅಣ್ಣಾ ಹಜಾರೆ 2011ರಲ್ಲಿ ನಡೆಸಿದ ಹೋರಾಟದ ಪರಿಣಾಮ 2013ರಲ್ಲಿ  ಲೋಕಾಪಾಲ್ ಮತ್ತು ಲೋಕಾಯುಕ್ತ ಕಾಯ್ದೆ ಅಂಗೀಕಾರವಾಗಿದೆ. ಆದರೆ, ಈವರೆಗೂ ಕೇಂದ್ರದಲ್ಲಿ ಒಂಬುಡ್ಸ್ ಮನ್ ನೇಮಕ ಆಗಿಲ್ಲ.

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ನೀಡಬೇಕು. ಹಾಗೂ ಕೃಷಿಕರ ಸಮಸ್ಯೆ ಬಗೆಹರಿಸಬೇಕೆಂದು ಈ ಬಾರಿಯ ಅಣ್ಣಾ ಹಜಾರೆ ಅವರ ಬೇಡಿಕೆಯಾಗಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.