ಪಂಚಾಯ್ತಿ ಆದೇಶ; ಸಾರ್ವಜನಿಕವಾಗಿ ಪತ್ನಿಗೆ ಥಳಿಸಿದ ಪತಿ, ವಿಡಿಯೋ ವೈರಲ್
ಪರ ಪುರುಷನೊಂದಿಗೆ ಓಡಿ ಹೋಗಿದ್ದ ಪತ್ನಿಯನ್ನು ಥಳಿಸುವಂತೆ ಸ್ಥಳೀಯ ಪಂಚಾಯ್ತಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪತಿ ಪತ್ನಿಯನ್ನು ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ...

Published On :
ಬುಲಂದರ್ಶಹಾರ್(ಉತ್ತರಪ್ರದೇಶ): ಪರ ಪುರುಷನೊಂದಿಗೆ ಓಡಿ ಹೋಗಿದ್ದ ಪತ್ನಿಯನ್ನು ಥಳಿಸುವಂತೆ ಸ್ಥಳೀಯ ಪಂಚಾಯ್ತಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪತಿ ಪತ್ನಿಯನ್ನು ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮತ್ತೊಂದು ಊರಿನಲ್ಲಿ ಪರ ಪುರುಷನ ಜತೆಗೆ ತಂಗಿದ್ದ ಪತ್ನಿಯನ್ನು ಪತಿ ಬಲವಂತವಾಗಿ ಸ್ವಗ್ರಾಮಕ್ಕೆ ಕರೆ ತಂದಿದ್ದ ನಂತರ ಆಕೆಯನ್ನು ಮರವೊಂದಕ್ಕೆ ಕಟ್ಟಿ ಗ್ರಾಮಸ್ಥರ ಎದುರೆ ಆಕೆಗೆ ಥಳಿಸಲಾಗಿದೆ.
ಬುಲಂದರ್ಶಹಾರ್ ನ ಲೌಂಗಾ ಗ್ರಾಮದಲ್ಲಿ ಮಾರ್ಚ್ 10ರಂದು ಈ ಘಟನೆ ನಡೆದಿದ್ದು 12 ದಿನಗಳ ಬಳಿಕ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಊರಿನ ಮಧ್ಯದಲ್ಲಿ ಮರವೊಂದಕ್ಕೆ ಮಹಿಳೆಯನ್ನು ಕಟ್ಟಿದ ನಂತರ ಆಕೆಯ ಪತಿ ಬೆಲ್ಟ್ ತೆಗೆದುಕೊಂಡು ಮನಸೋ ಇಚ್ಛೆ ಥಳಿಸಿದ್ದಾನೆ. ಇದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಜಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ವಿಡಿಯೋ ವೈರಲ್ ಆಗಿದ್ದು ಪ್ರಕರಣ ಬಯಲಿಗೆ ಬಂದಿದೆ.
ವಿಡಿಯೋ ಆಧಾರದ ಮೇಲೆ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಾಜನ್ ಸಿಂಗ್ ಅವರು ಮಹಿಳೆಯ ಪತಿ. ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಆತನ ಮಗನನ್ನು ಬಂಧಿಸಿದ್ದಾರೆ. ಜೊತೆಗೆ 12 ಅಪರಿಚಿತರು ಸೇರಿದಂತೆ 18 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


