ರಾಜ್ಯಸಭೆ ಚುನಾವಣೆ: ಉತ್ತರ ಪ್ರದೇಶದಲ್ಲಿ ಅಡ್ಡಮತದಾನ, ಬಿಎಸ್ ಪಿ ಶಾಸಕನಿಂದ ಬಿಜೆಪಿಗೆ ಮತ
ಹಾಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಎಸ್ ಪಿ ಶಾಸಕರೊಬ್ಬರು ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Published On :
ಲಖನೌ: ಹಾಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಬಿಎಸ್ ಪಿ ಶಾಸಕರೊಬ್ಬರು ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮಗಳ ವರದಿಗಳ ಅನ್ವಯ ಬಹುಜನ ಸಮಾಜವಾದಿ ಪಕ್ಷದ ಶಾಸಕ ಅನಿಲ್ ಸಿಂಗ್ ಎಂಬುವವರು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬ್ಯಾಲೆಟ್ ಪೇಪರ್ ನಲ್ಲಿ ಬಿಜೆಪಿ ಗುರುತಿಗೆ ಟಿಕ್ ಮಾಡುವ ಮೂಲಕ ಆ ಮತ ಪತ್ರವನ್ನು ಏಜೆಂಟ್ ಗಳಿಗೆ ತೋರಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪ್ರಸ್ತುತ ನಾನು ಮಾತ್ರ ಬಿಜೆಪಿ ಮತ ನೀಡಿದ್ದು, ಇತರರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ವರೆಗೂ ಸುಮಾರು 17 ಶಾಸಕರು ಮತದಾನ ಮಾಡಿದ್ದು, ಮಾಯಾವತಿ ನೇತೃತ್ವದ ಬಿಎಸ್ ಪಿ 19 ಶಾಸಕರನ್ನು ಹೊಂದಿದ್ದುಸಮಾಜವಾದಿ ಪಕ್ಷದ ಬೆಂಬಲ ನಿರೀಕ್ಷೆ ಮಾಡುತ್ತಿದೆ. ಇನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಹು ಸಂಖ್ಯಾಗಣವನ್ನು ಹೊಂದಿರುವ ಬಿಜೆಪಿ ಕೂಡ ತನ್ನ ಅಭ್ಯರ್ಥಿ ಬೆಂಬಲಿಲು ನಿರ್ಧರಿಸಿದ್ದು, ರಾಜ್ಯಸಭೆ ಚುನಾವಣೆ ಗೆಲ್ಲುವ ಮೂಲಕ ಈ ಹಿಂದಿನ ಉಪ ಚುನಾವಣೆ ಸೋಲನ್ನು ಮರೆ ಮಾಚುವ ಪ್ರಯತ್ನ ಮಾಡಿದೆ.
ಏತನ್ಮಧ್ಯೆ ಪಕ್ಷೇತರ ಶಾಸಕ ಅಮ್ಮಲ್ ಮಣಿ ಅವರು ಕೂಡ ಬಿಜೆಪಿಗೆ ಮತನೀಡಿದ್ದು, ಸಿಎಂ ಯೋಗಿ ಆದಿತ್ಯಾ ನಾಥ್ ಅವರು ಆಶ್ವಾಸವೆಯಂತೆ ಬಿಜೆಪಿ ಮತ ನೀಡಿದ್ದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


