ದೇಶ

ಇತಿಹಾಸ ನಿರ್ಮಿಸಿದ ಏರ್ ಇಂಡಿಯಾ, ಇಸ್ರೇಲ್ ಗೆ ಸೌದಿ ವಾಯುಪ್ರದೇಶ ಬಳಸಿ ಹಾರಾಟ

ಏರ್ ಇಂಡಿಯಾದ ಮೊದಲ ವಿಮಾನ ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ಹೋಗಿ ತಂಗಿದ್ದು ಪ್ರಯಾಣದ ...

ಇತಿಹಾಸ ನಿರ್ಮಿಸಿದ ಏರ್ ಇಂಡಿಯಾ, ಇಸ್ರೇಲ್ ಗೆ ಸೌದಿ ವಾಯುಪ್ರದೇಶ ಬಳಸಿ ಹಾರಾಟ
ಏರ್ ಇಂಡಿಯಾ
Published On :

ಏರ್ ಇಂಡಿಯಾದ ಮೊದಲ ವಿಮಾನ ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ಹೋಗಿ ತಂಗಿದ್ದು ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿದೆ. ತನ್ನ ವಾಯುಮಾರ್ಗವನ್ನು ಬಳಸಿಕೊಳ್ಳಲು ವಾಣಿಜ್ಯ ವಿಮಾನಕ್ಕೆ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಅವಕಾಶ ನೀಡಿದೆ.

ವಿಮಾನ ಸಂಚಾರದಿಂದ ಭಾರತ ಮತ್ತು ಇಸ್ರೇಲ್ ನಡುವೆ ಜನರ ನಡುವಿನ ಸಂಪರ್ಕ ಮತ್ತು ರಾಜತಾಂತ್ರಿಕ ಬಾಂಧವ್ಯದಲ್ಲಿ ಹೊಸ ಶಕೆ ಆರಂಭವಾಗಲಿದೆ. ಏರ್ ಇಂಡಿಯಾ ದೆಹಲಿಯಿಂದ ಟೆಲ್ ಅವಿವ್ ಗೆ ವಾರಕ್ಕೆ ಮೂರು ಬಾರಿ ನೇರ ವಿಮಾನ ಸಂಚಾರ ಆರಂಭಿಸಿದೆ.

ಸೌದಿ ಅರೇಬಿಯಾ ತನ್ನ ವಾಯುಮಾರ್ಗವನ್ನು ಬಳಸಲು ಅವಕಾಶ ನೀಡಿರುವುದರಿಂದ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ದೆಹಲಿಯಿಂದ ಟೆಲ್ ಅವಿವಾಗೆ ಪ್ರಯಾಣದ ಅವಧಿ 7.25 ಗಂಟೆಯಾಗಲಿದೆ ಸುಮಾರು 2.10 ಗಂಟೆ ಅವಧಿ ಕಡಿಮೆಯಾಗಲಿದೆ. ಪ್ರಸ್ತುತ ಇಸ್ರೇಲ್ ನ ಎಲ್ ಅಲ್ ವಿಮಾನ ಇಸ್ರೇಲ್ ಮತ್ತು ಭಾರತದ ಮಧ್ಯೆ ಹಾರಾಟ ನಡೆಸುತ್ತಿದೆ.
ನಿನ್ನೆ ಇಸ್ರೇಲ್ ನ ಕಾಲಮಾನ ರಾತ್ರಿ 10 ಗಂಟೆ 15 ನಿಮಿಷಕ್ಕೆ ಅಲ್ 139 ವಿಮಾನ ಟೆಲ್ ಅವಿವ್ ನ ಗುರಿಯಾನ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಇದೊಂದು ಐತಿಹಾಸಿಕ ಕ್ಷಣ. ನಾವು ಹೊಸ ಯುಗದಲ್ಲಿದ್ದೇವೆ, ಭಾರತೀಯ ಪ್ರಯಾಣಿಕರು ಇಸ್ರೇಲ್ ಗೆ ಹೆಚ್ಚು ಹೆಚ್ಚಾಗಿ ಬರುವ ನಿರೀಕ್ಷೆಯಿದೆ. ಇಸ್ರೇಲಿಯನ್ನರು ಕೂಡ ಭಾರತಕ್ಕೆ ಹೆಚ್ಚು ಹೆಚ್ಚು ಹೋಗುವ ನಿರೀಕ್ಷೆಯಿದೆ ಎಂದರು ಇಸ್ರೇಲ್ ನ ಪ್ರವಾಸೋದ್ಯಮ ಸಚಿವ ಯಾರಿವ್ ಲೆವಿನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.