ಕ್ಯಾಬ್ ಚಾಲಕರ ಮುಷ್ಕರದಿಂದ ಪ್ರಯಾಣಿಕರಿಗೆ ಅನಾನೂಕೂಲ : ಉಬರ್ ಕ್ಷಮೆಯಾಚನೆ
ಕೆಲ ಚಾಲಕರು ಕರೆ ನೀಡಿದ ಮುಷ್ಕರಿಂದ ಪ್ರಯಾಣಿಕರಿಗೆ ಅನಾನೂಕೂಲವಾಗಿದ್ದಕ್ಕೆ ಉಬರ್ ಕಂಪನಿ ಪ್ರಯಾಣಿಕರ ಕ್ಷಮೆ ಯಾಚಿಸಿದ್ದು, ನಗರದಲ್ಲಿ ಸೇವೆ ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದೆ.

ನವದೆಹಲಿ: ಕೆಲ ಕ್ಯಾಬ್ ಚಾಲಕರು ಕರೆ ನೀಡಿದ ಮುಷ್ಕರಿಂದ ಪ್ರಯಾಣಿಕರಿಗೆ ಅನಾನೂಕೂಲವಾಗಿದ್ದಕ್ಕೆ ಉಬರ್ ಕಂಪನಿ ಪ್ರಯಾಣಿಕರ ಕ್ಷಮೆ ಯಾಚಿಸಿದ್ದು, ನಗರದಲ್ಲಿ ಸೇವೆ ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದೆ.
ನಗರದ ಜನತೆಗೆ ಸೇವೆ ಒದಗ್ಗಿಸಲು ಬದ್ಧವಾಗಿದ್ದೇವೆ. ನಗರದಲ್ಲಿಯೇ ಉತ್ತಮ ಆದಾಯ ಗಳಿಸಲು ಅನುಕೂಲವಿರುವುದಾಗಿ ಚಾಲಕರಿಗೆ ಭರವಸೆ ನೀಡುವುದಾಗಿ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಉಬರ್ ಚಾಲಕರ ಚಟುವಟಿಕೆಗಳಿಗೆ ತಡೆಯೊಡ್ಡುವ ಒಕ್ಕೂಟ ಮತ್ತು ಅವರ ಮುಖಂಡರ ನಿಯಂತ್ರಣಕ್ಕೆ ಬಾಂಬೈ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಸ್ವಾಗರ್ತಾಹವಾಗಿದ್ದು, ಚಾಲಕರಿಗೆ ಸಂಬಂಧಿಸಿದಂತೆ ಉತ್ತಮ ತೀರ್ಪು ಕೊಡುವ ವಿಶ್ವಾಸದಲ್ಲಿರುವುದಾಗಿ ತಿಳಿಸಿದ್ದಾರೆ.
ಉಬರ್ ಚಾಲಕರು ಮತ್ತು ಪ್ರಯಾಣಿಕರಿಗೆ ತೊಂದರೆ ಕೊಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಬಂಧಿತ ಸಂಸ್ಥೆಗಳು ಭರವಸೆ ನೀಡಿದ್ದು, ಹೈಕೋರ್ಟ್ ನಿಂದ ಉತ್ತಮ ಆದೇಶ ಬರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.
ಉಬರ್ ಚಾಲಕರ ಮುಷ್ಕರದಿಂದಾಗಿ ಮುಂಬೈ, ಪುಣೆಯಲ್ಲಿ ಮಾತ್ರ ಪರಿಣಾಮ ಉಂಟಾಯಿತು. ದೆಹಲಿ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವ್ಯವಹಾರ ಎಂದಿನಂತೆ ಸಾಗಿತ್ತು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


