ದೇಶ

ಅರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿಗಳಿಗೆ ಸುಪ್ರೀಂ ನೋಟೀಸ್

2008 ರಲ್ಲಿ ನಡೆದಿದ್ದ ಆರುಷಿ ಮತ್ತು ಮನೆಕೆಲಸಗಾರ ಹೇಮರಾಜ್ ಹತ್ಯೆ ಪ್ರಕರಣ ಸಂಬಂಧ ದಂಪತಿಗಳಾದ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಅವರನ್ನು.......

ಅರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿಗಳಿಗೆ ಸುಪ್ರೀಂ ನೋಟೀಸ್
ಅರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿಗಳಿಗೆ ಸುಪ್ರೀಂ ನೋಟೀಸ್
Published On :
ನವದೆಹಲಿ: 2008 ರಲ್ಲಿ ನಡೆದಿದ್ದ ಆರುಷಿ ಮತ್ತು ಮನೆಕೆಲಸಗಾರ ಹೇಮರಾಜ್ ಹತ್ಯೆ ಪ್ರಕರಣ ಸಂಬಂಧ ದಂಪತಿಗಳಾದ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಅವರನ್ನು ವಿಚಾರಣೆ ನಡೆಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಸ್ವೀಕರಿಸಿದೆ.
ಹೇಮರಾಜ್ ಅವರ ಪತ್ನಿ ಖುಂಕಲಾ ಬಂಜಾದೆ ಅವರು ದಂಪತಿಗಳ ವಿಚಾರಣೆಗಾಗಿ ಮನವಿ ಸಲ್ಲಿಸಿದ್ದರು.
ಅರ್ಜಿ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ತಲ್ವಾರ್ ದಂಪತಿಗಳಿಗೆ ನೋಟೀಸ್ ನೀಡಿದೆ ಪ್ರಕರಣಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ . ಕಳೆದ ಅಕ್ಟೋಬರ್ ನಲ್ಲಿ  ತಲ್ವಾರ್ ದಂಪತಿಗಳನ್ನು ಖುಲಾಸೆಗೊಳಿಸಿತ್ತು.
ಇದಾಗಿ ಹೇಮರಾಜ್ ಪತ್ನಿ ಖುಂಕಲಾ ತಲ್ವಾರ್ ದಂಪತಿಗಳನ್ನು ಮರುವಿಚಾರಣೆ ನಡೆಸುವಂತೆ ಕೋರಿ ಡಿಸೆಂಬರ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಹತ್ಯೆ ಪ್ರಕರಣ ಸಂಬಂಧ ತಲ್ವಾರ್ ದಂಪತಿಗಳನ್ನು ಖುಲಾಸೆಗೊಳಿಸುವುದನ್ನು ಪ್ರಶ್ನಿಸಿ ಸಿಬಿಐ ಸಹ ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸಿತ್ತು.
ಜೋಡಿ ಕೊಲೆ ಸಂಬಂಧ ಪೂರಕ ಪುರಾವೆಗಳಿಲ್ಲದೆ ಇರುವ ಹಿನ್ನೆಲೆಯಲ್ಲಿ ಅಲಹಬಾದ್ ಹೈಕೋರ್ಟ್ ಕಳೆದ ಅಕ್ಟೋಬರ್ ನಲ್ಲಿ ತಲ್ವಾರ್ ದಂಪತಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.