ಪ್ರೀತಿ ನಿವೇದನೆಗೆ ಯುವತಿ ನಕಾರ: ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಐಟಿಐ ವಿದ್ಯಾರ್ಥಿ
ತನ್ನ ಪ್ರೀತಿ ನಿವೇದನೆಗೆ ಯುವತಿ ನಕಾರ ವ್ಯಕ್ತಪಡಿಸಿದ್ದಕ್ಕೆ ನೊಂದ ಐಟಿಐ ವಿದ್ಯಾರ್ಥಿಯೊಬ್ಬ ಯುವತಿಗೆ ಲೈವ್ ವಿಡಿಯೋ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್'ನ ಮುಲ್ಕಾಜ್ ಗಿರಿ ವಿನಾಯಕ ನಗರದಲ್ಲಿ ಬುಧವಾರ ನಡೆದಿದೆ...

Published On :
ಹೈದರಾಬಾದ್: ತನ್ನ ಪ್ರೀತಿ ನಿವೇದನೆಗೆ ಯುವತಿ ನಕಾರ ವ್ಯಕ್ತಪಡಿಸಿದ್ದಕ್ಕೆ ನೊಂದ ಐಟಿಐ ವಿದ್ಯಾರ್ಥಿಯೊಬ್ಬ ಯುವತಿಗೆ ಲೈವ್ ವಿಡಿಯೋ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್'ನ ಮುಲ್ಕಾಜ್ ಗಿರಿ ವಿನಾಯಕ ನಗರದಲ್ಲಿ ಬುಧವಾರ ನಡೆದಿದೆ.
ಅಜ್ಮೀರ್ ಸಾಗರ್ (20) ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದಾನೆ. ಸನಾತ್ ನಗರದಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಸಾಗರ್ ವಿದ್ಯಾಭ್ಯಾಸ ಮಾಡುತ್ತಿದ್ದ. ನೆರೆದ್ಮೆಟ್ ಪೊಲೀಸ್ ಠಾಣಾ ನಿಯಂತ್ರಣದಲ್ಲಿರುವ ತನ್ನ ಹಿರಿಯ ಸಹೋದರಿ ಮನೆಯಲ್ಲಿ ಸಾಗರ್ ನೆಲೆಸಿದ್ದ. ಮನೆಯ ಹತ್ತಿದಲ್ಲೇ ಇದ್ದ 17 ವರ್ಷದ ಯುವತಿಯನ್ನು ಸಾಗರ್ ಇಷ್ಟಪಟ್ಟಿದ್ದ. ಇದರಂತೆ ಯುವತಿಗೆ ತನ್ನ ಪ್ರೀತಿ ನಿವೇದನೆಯನ್ನು ಹೇಳಿದ್ದಾನೆ. ಆದರೆ, ಯುವತಿ ಇದಕ್ಕೆ ನಿರಾಕರಿಸಿದ್ದಾಳೆ.
ಸಾಗರ್ ತನ್ನ ಮನೆಯವರಿಗೂ ಕೂಡ ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದ. ಆದರೆ, ಇದಕ್ಕೆ ಮನೆಯವರು ನಿರಾಕರಿಸಿದ್ದರು. ಇದರಿಂದ ಸಾಕಷ್ಟು ನೊಂದಿದ್ದ ಸಾಗರ್, ಬುಧವಾರ ಬೆಳಿಗ್ಗೆ 10.41ರ ಸುಮಾರಿಗೆ ಮನೆಯಲ್ಲಿ ಒಬ್ಬನೇ ಇದ್ದ ಸಂದರ್ಭದಲ್ಲಿ ಯುವಕರಿದೆ ಸಂದೇಶವನ್ನು ಕಳುಸಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ವಿಡಿಯೋ ಕರೆ ಮಾಡುವುದಾಗಿ ತಿಳಿಸಿದ್ದಾನೆ. ಬಳಿಕ ಲೈವ್ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ.
ಸಾಗರ್ ಸಹೋದರಿ ಮನೆಯ ಮಾಲೀಕರಿಗೆ ಕರೆ ಮಾಡಿ ತನ್ನ ಸಹೋದರ ಫೋನ್ ತೆಗೆಯುತ್ತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮನೆಯ ಮಾಲೀಕ ಮನೆಯ ಬಾಗಿಲನ್ನು ಒಡೆದು ಹೊರ ಬಂದಾಗ ಸಾಗರ್ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


