ದೇಶ

2019ರ ಅವಧಿಗೆ ಲೋಕಸಭೆಯಲ್ಲಿ ಬಿಜೆಪಿಯ ಸ್ಥಾನ 110ಕ್ಕೆ ಕುಸಿಯಲಿದೆ: ಶಿವಸೇನಾ

ಪ್ರತಿಷ್ಠೆ ಹಾಗೂ ಒಣಜಂಭದಿಂದಾಗಿ ಉತ್ತರಪ್ರದೇಶ ಗೋರಖ್ ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಶರಣಾಗಿದ್ದು, 2019ರ ಸಾರ್ವತ್ರಿಕ ಚುನಾವಣೆ ವೇಳೆಗೆ ಬಿಜೆಪಿ ಲೋಕಸಭೆಯಲ್ಲಿ 110 ಸ್ಥಾನಗಳನ್ನು ಹೊಂದಲಿದೆ ಎಂದು ಎನ್ ಡಿಎ ಅಂಗಪಕ್ಷವಾಗಿರುವ ಶಿವಸೇನಾ ಮುಖವಾಣಿಯಲ್ಲಿ ಹೇಳಲಾಗಿದೆ.

2019ರ ಅವಧಿಗೆ   ಲೋಕಸಭೆಯಲ್ಲಿ ಬಿಜೆಪಿಯ ಸ್ಥಾನ 110ಕ್ಕೆ ಕುಸಿಯಲಿದೆ: ಶಿವಸೇನಾ
ಉದ್ದವ್ ಠಾಕ್ರೆ
Published On :

ಮುಂಬೈ : ಪ್ರತಿಷ್ಠೆ ಹಾಗೂ ಒಣಜಂಭದಿಂದಾಗಿ ಉತ್ತರಪ್ರದೇಶ ಗೋರಖ್ ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಶರಣಾಗಿದ್ದು, 2019ರ ಸಾರ್ವತ್ರಿಕ ಚುನಾವಣೆ ವೇಳೆಗೆ  ಬಿಜೆಪಿ ಲೋಕಸಭೆಯಲ್ಲಿ 110 ಸ್ಥಾನಗಳನ್ನು ಹೊಂದಲಿದೆ ಎಂದು ಎನ್ ಡಿಎ ಅಂಗಪಕ್ಷವಾಗಿರುವ ಶಿವಸೇನಾ ಮುಖವಾಣಿಯಲ್ಲಿ ಹೇಳಲಾಗಿದೆ.

ತಮ್ಮ ಸ್ನೇಹಿತರು ಹಾಗೂ ಮೈತ್ರಿ ಮಾರ್ಗ ಮರೆಯುವರೆಗೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ  ಎಂದು ಶಿವಸೇನಾ ಟಾಂಗ್ ನೀಡಿದೆ.

ತ್ರಿಪುರಾದಂತಹ ಸಣ್ಣ ರಾಜ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಬಿಜೆಪಿ ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವರ್ಚಸ್ಸು ಕಳೆದುಕೊಂಡಿದೆ . ಇದು ಬಿಜೆಪಿ ಕ್ಯಾಂಪಿನಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಹೇಳಲಾಗಿದೆ.

ಗೋರಖ್ ಪುರ ಹಾಗೂ ಫುಲ್ಪುರ್ ಎರಡೂ ಕ್ಷೇತ್ರಗಳಲ್ಲಿಯೂ ಸಮಾಜವಾದಿ ಗೆದಿದ್ದೆ,ಬಿಜೆಪಿ ಅಧಿಕಾರಕ್ಕೆ ಬಂದ ನಂತರ 10 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, 9ರಲ್ಲಿ ಬಿಜೆಪಿ ಸೋತಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.

ಲೋಕಸಭೆಯಲ್ಲಿ 282 ಸಂಸದರನ್ನು ಹೊಂದಿದ್ದ ಬಿಜೆಪಿ ಈಗ 272ಕ್ಕೆ ಇಳಿದಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನಾಯಕತ್ವದಲ್ಲಿ ಬಿಜೆಪಿ ಎಲ್ಲಾ ಉಪಚುನಾವಣೆಯಲ್ಲೂ ಸೋತಿದೆ ಎಂದು ಉದ್ದವ್ ಠಾಕ್ರೆ ನಾಯಕತ್ವದ ಶಿವಸೇನಾ ಹೇಳಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.