ಜಯಾ ನಿವಾಸ ಸ್ಮಾರಕವಾಗಿ ಪರಿವರ್ತಿಸಲು 20 ಕೋಟಿ ರು. ಅನುದಾನ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ವಾಸವಿದ್ದ ಪೋಯಸ್ ಗಾರ್ಡನ್ ನ 'ವೇದಾ ನಿಲಯಂ'....

Published On :
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ವಾಸವಿದ್ದ ಪೋಯಸ್ ಗಾರ್ಡನ್ ನ 'ವೇದಾ ನಿಲಯಂ' ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲು ತಮಿಳುನಾಡು ಸರ್ಕಾರ 2018ನೇ ಸಾಲಿನ ಬಜೆಟ್ ನಲ್ಲಿ 20 ಕೋಟಿ ರುಪಾಯಿ ಅನುದಾನ ನೀಡಿದೆ.
ಜಯಲಲಿತಾ ಅವರ ನಿವಾಸ ಸ್ಮಾರಕವಾಗಿ ಪರಿವರ್ತಿಸಲು 20 ಕೋಟಿ ರುಪಾಯಿ ಹಾಗೂ ಮರಿನಾ ಬೀಚ್ ನಲ್ಲಿನ ಭವ್ಯ ಸ್ಮಾರಕಕ್ಕೆ 50.80 ಕೋಟಿ ರುಪಾಯಿ ನೀಡಲಾಗಿದೆ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲು ಇತ್ತೀಚಿಗೆ ಪೂರ್ವ ಸಿದ್ಧತಾ ಕಾರ್ಯಗಳು ನಡೆದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.
ಜಯಲಲಿತಾ ಅವರು ಡಿಸೆಂಬರ್ 5, 2016ರಲ್ಲಿ ನಿಧನರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


