ದೇಶ

ನರೇಶ್ ಅಗರ್ ವಾಲ್ ಬಿಜೆಪಿ ಸೇರಿಕೊಂಡಿದ್ದೇ ಉತ್ತರ ಪ್ರದೇಶದಲ್ಲಿ ಹಿನ್ನೆಡೆಗೆ ಕಾರಣ: ಶಿವಸೇನಾ

ಸಮಾಜವಾದಿ ಪಕ್ಷದ ನರೇಶ್ ಅಗರ್ ವಾಲ್ ಬಿಜೆಪಿ ಸೇರಿಕೊಂಡಿದ್ದೇ ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆಗೆ ಕಾರಣ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

ನರೇಶ್ ಅಗರ್ ವಾಲ್ ಬಿಜೆಪಿ ಸೇರಿಕೊಂಡಿದ್ದೇ ಉತ್ತರ ಪ್ರದೇಶದಲ್ಲಿ ಹಿನ್ನೆಡೆಗೆ ಕಾರಣ: ಶಿವಸೇನಾ
ನರೇಶ್ ಅಗರ್ ವಾಲ್
Published On :

ಮುಂಬೈ: ಸಮಾಜವಾದಿ ಪಕ್ಷದ ನರೇಶ್ ಅಗರ್ ವಾಲ್ ಬಿಜೆಪಿ ಸೇರಿಕೊಂಡಿದ್ದೇ ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆಗೆ ಕಾರಣ ಎಂದು ಶಿವಸೇನಾ ಸಂಸದ ಸಂಜಯ್ ರಾವತ್  ಅಭಿಪ್ರಾಯಪಟ್ಟಿದ್ದಾರೆ.

ಸಮಾಜವಾದಿ - ಎಸ್ಪಿ ಮೈತ್ರಿಯನ್ನು ಪರಿಗಣಿಸುವುದಿಲ್ಲ. ರಾಮನನ್ನೇ ಟೀಕಿಸಿದ್ದ ಸಮಾಜವಾದಿ ನಾಯಕನನ್ನು ಕೆಂಪು ಹಾಸಿಗೆ ಬರಮಾಡಿಕೊಂಡಿದ್ದ ಬಿಜೆಪಿ ವಿರುದ್ಧ ರಾಮ ಆಕ್ರೋಶಗೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

 ಸಿಎಂ ಯೋಗಿ ಆದಿತ್ಯನಾಥ ತವರು  ಕ್ಷೇತ್ರದಲ್ಲಿಯೇ  ಬಿಜೆಪಿಗೆ ಭಾರೀ ಹಿನ್ನೆಡೆಯುಂಟಾಗಿದೆ. ಗೋರಖ್ ಪುರ ಹಾಗೂ ಪುಲ್ಪುರ್  ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಎದುರು ಸಮಾಜವಾದಿ ಅಭ್ಯರ್ಥಿಗಳು ಭಾರೀ ಅಂತರದಿಂದ ಜಯಗಳಿಸಿದ್ದಾರೆ.

ಮಾರ್ಚ್ 11 ರಂದು ಈ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಜಯಾಬಚ್ಚನ್ ರಾಜ್ಯಸಭೆಗೆ ಪುನ: ನಾಮಪತ್ರ ಸಲ್ಲಿಸಿದ್ದ ನಂತರ ನರೇಶ್ ಅಗರ್ ವಾಲ್ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.