ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ: ನಟ ರಜನೀಕಾಂತ್
ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ. ರಾಜಕೀಯ ಹೇಳಿಕೆ ನೀಡುವ ಸಮಯ ಬಂದಿಲ್ಲ ಎಂದು ನಟ ರಜನೀಕಾಂತ್ ಅವರು ಮಂಗಳವಾರ ಹೇಳಿದ್ದಾರೆ...

Published On :
ಹೃಷಿಕೇಶ: ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ. ರಾಜಕೀಯ ಹೇಳಿಕೆ ನೀಡುವ ಸಮಯ ಬಂದಿಲ್ಲ ಎಂದು ನಟ ರಜನೀಕಾಂತ್ ಅವರು ಮಂಗಳವಾರ ಹೇಳಿದ್ದಾರೆ.
ಕಾವೇರಿ ವಿವಾದ ಸೇರಿದಂತೆ ತಮಿಳುನಾಡಿನ ಸಮಸ್ಯೆಗಳ ಬಗ್ಗೆ ರಜನೀಕಾಂತ್ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಸಹ ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಕೆಲದಿನಗಳ ಕಾಲ ಧ್ಯಾನ ಕೈಗೊಳ್ಳುವುದಕ್ಕಾಗಿ ಉಳಿದುಕೊಂಡಿರುವ ದಯಾನಂದ ಸರಸ್ವತಿ ಆಶ್ರಮದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಇನ್ನೂ ನನ್ನ ಪಕ್ಷವನ್ನು ಘೋಷಿಸಿಲ್ಲ. ಪ್ರಸ್ತುತ ನಾನು ರಾಜಕಾರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಹಿಮಾಲಯಕ್ಕೆ ತಾವು ಕೈಗೊಂಡಿರುವ ಆಧ್ಯಾತ್ಮಿಕ ಪ್ರವಾಸ ತನ್ನನ್ನು ತಾನು ಅರಿಯುವುದಕ್ಕಾಗಿ, ರಾಜಕಾರಣ ಆರಂಭಿಸಿರುವುದಕ್ಕೂ ಹಿಮಾಲಯದಲ್ಲಿ ಆಧ್ಯಾತ್ಮ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ. ಮೊದಲ ಬಾರಿಗೆ ನಾನು ಹಿಮಾಲಯಕ್ಕೆ ಆಗಮಿಸುತ್ತಿಲ್ಲ. ನಾನು ಇಲ್ಲಿಗೆ ಹಲವಾರು ಬಾರಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


