ಪ್ರಧಾನಿ ಮೋದಿ, ಟ್ರಂಪ್, ಪೋಪ್ ಟ್ವಿಟ್ಟರ್ ಫಾಲೋಯರ್ ಗಳು ಶೇ.60ರಷ್ಟು ನಕಲಿ!
ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ರಾಜಕೀಯ ಮುಖಂಡರ ಪೈಕಿ ...

ನವದೆಹಲಿ: ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ರಾಜಕೀಯ ಮುಖಂಡರ ಪೈಕಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು. ಸಾಮಾಜಿಕ ಜಾಲತಾಣಗಳಲ್ಲಿ ಅವರು ಹೆಚ್ಚು ಜನಪ್ರಿಯರಾಗಿದ್ದಾರೆ. ಆದರೆ ಟ್ವಿಪ್ಲೊಮೆಸಿ ಇತ್ತೀಚೆಗೆ ನಡೆಸಿರುವ ಅಧ್ಯಯನದಲ್ಲಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯಲ್ಲಿರುವ ಶೇಕಡಾ 60ರಷ್ಟು ಅನುಯಾಯಿಗಳು ನಕಲಿ.
ಡಿಜಿಟಲ್ ಪ್ಲಾಟ್ ಫಾರ್ಮ್ ಆಗಿರುವ ಟ್ವಿಪ್ಲೊಮೆಸಿ, ಅಂತಾರಾಷ್ಟ್ರೀಯ ಸಂಘಟನೆಗಳು ಮತ್ತು ಸರ್ಕಾರಗಳಿಗೆ ಡಿಜಿಟಲ್ ಕಾರ್ಯತಂತ್ರಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೋದಿಯವರ 40,993,053 ಅನುಯಾಯಿಗಳಲ್ಲಿ 24,799,527 ಅನುಯಾಯಿಗಳ ಖಾತೆ ನಿಜವಾಗಿದ್ದು, 16,191,426 ಅನುಯಾಯಿಗಳು ನಕಲಿ ಎಂದು ಗೊತ್ತಾಗಿದೆ.
ಟ್ವಿಟ್ಟರ್ ಲೆಕ್ಕಪತ್ರ ಅಲ್ಗೊರಿತಮ್ ಸಹಾಯದಿಂದ ಈ ಸಂಖ್ಯೆಯನ್ನು ದೃಢಪಡಿಸಲಾಗಿದೆ. ಇದು ಕೇವಲ ನರೇಂದ್ರ ಮೋದಿಯವರದ್ದು ಮಾತ್ರವಲ್ಲ, ವಿಶ್ವದ ಪ್ರಮುಖ ರಾಜಕೀಯ ನಾಯಕರಾದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೋಪ್ ಫ್ರಾನ್ಸಿಸ್, ಕಿಂಗ್ ಸಲ್ಮಾನ್ ಅವರ ಟ್ವಿಟ್ಟರ್ ಖಾತೆಗಳಲ್ಲಿ ಕೂಡ ಹಲವು ನಕಲಿ ಅನುಯಾಯಿಗಳಿದ್ದಾರೆ.
ವರದಿ ಪ್ರಕಾರ, 12,445,604 ಟ್ರಂಪ್ ಅನುಯಾಯಿಗಳಲ್ಲಿ 48,939,948 ಅನುಯಾಯಿಗಳು ನಿಜವಾಗಿದ್ದು 35,980,870 ನಕಲಿ ಎಂದು ಗೊತ್ತಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯಲ್ಲಿ 3,696,460 ನಕಲಿ ಅನುಯಾಯಿಗಳು ಮತ್ತು 1,715,634 ನಿಜವಾದ ಅನುಯಾಯಿಗಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಶೇಕಡಾ 59ರಷ್ಟು ಅನುಯಾಯಿಗಳು ನಕಲಿ ಖಾತೆಗಳು.
World Leaders and their Fake followers
— Twiplomacy
Some of the most followed world leaders and their share of bot followers as determined by https://t.co/TdNIomSdNt. Graphics prepared by @Saosasha @gzeromedia#DigitalDiplomacy pic.twitter.com/viid9ZTReV
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


