ಮೈಕ್ ಎಸೆದ ಪ್ರಕರಣ: ಇಬ್ಬರು ಕಾಂಗ್ರೆಸ್ ಶಾಸಕರ ಉಚ್ಚಾಟನೆ
ತೆಲಂಗಾಣ ವಿಧಾನಸಭೆಯ ಕಾಂಗ್ರೆಸ್ ಶಾಸಕ ಕೋಮತಿ ವೆಂಕಟರೆಡ್ಡಿ ಎಸೆದ ಮೈಕ್ ತಾಗಿ, ಸಭಾಧ್ಯಕ್ಷರ ಕಣ್ಣಿಗೆ ಗಾಯವಾಗಿರುವ ಪ್ರಕರಣ ಸಂಬಂಧ, ಇಬ್ಬರು ...

Published On :
ತೆಲಂಗಾಣ: ತೆಲಂಗಾಣ ವಿಧಾನಸಭೆಯ ಕಾಂಗ್ರೆಸ್ ಶಾಸಕ ಕೋಮತಿ ವೆಂಕಟರೆಡ್ಡಿ ಎಸೆದ ಮೈಕ್ ತಾಗಿ, ಸಭಾಧ್ಯಕ್ಷರ ಕಣ್ಣಿಗೆ ಗಾಯವಾಗಿರುವ ಪ್ರಕರಣ ಸಂಬಂಧ, ಇಬ್ಬರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲಾಗಿದೆ.
ಕಾಂಗ್ರೆಸ್ ಶಾಸಕ ಕೋಮತಿ ರೆಡ್ಡಿ ಮತ್ತು ಸಂಪತ್ ಕುಮಾರ್ ಅವರನ್ನು ತೆಲಂಗಾಣ ಶಾಸನಸಭೆಯಿಂದ ಅಮಾನತುಗೊಳಿಸಲಾಗಿದೆ. ಇದರ ಜೊತೆಗೆ
ತೆಲಂಗಾಣ ರಾಜ್ಯ ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಮೊದಲ ದಿನದ ಜಂಟಿ ಅಧಿವೇಶನವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರ ಭಾಷಣ ಮುಗಿಯುತ್ತಿದ್ದಂತೆಯೇ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಭಾರೀ ಗದ್ದಲವನ್ನುಂಟು ಮಾಡಿದ್ದರು.
ಈ ವೇಳೆ ಕಾಂಗ್ರೆಸ್ ಶಾಸಕ ಕೋಮತಿರೆಡ್ಡಿ ವೆಂಕಟ ರೆಡ್ಡಿಯವರು ತಾವು ಹಾಕಿಕೊಂಡಿದ್ದ ಹೆಡ್ ಫೋನ್'ನ್ನು ಕಿತ್ತು ಎಸೆದಿದ್ದಾರೆ. ಈ ವೇಳೆ ಅದು ರಾಜ್ಯಪಾಲರ ಪಕ್ಕ ಕುಳಿತಿದ್ದ ವಿಧಾನಪರಿಷತ್ ಸಭಾಧ್ಯಕ್ಷ ಸ್ವಾಮಿ ಗೌಡ್ ಅವರ ಕಣ್ಣಿಗೆ ತಾಗಿ ರಕ್ತಸುರಿಯತೊಡಗಿತು. ಕೂಡಲೇ ಸಭಾಧ್ಯಕ್ಷರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
expelledಕಾಂಗ್ರೆಸ್ ಶಾಸಕTelangana Assemblyಉಚ್ಚಾಟನೆCongress Mla\'sHeadphones hurling incidentತೆಲಂಗಾಣ ಶಾಸನ ಸಭೆಹೆಡ್ ಫೋನ್ ಎಸೆದ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


