ದೋಷ ಶಂಕೆ: ಡಿಜಿಸಿಎಯಿಂದ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟ ಸ್ಥಗಿತ
ಎಂಜಿನ್ ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ನಾಗರೀಕ ವಿಮಾನಯಾನ ಪ್ರಾಧಿಕಾರ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

Published On :
ನವದೆಹಲಿ: ಎಂಜಿನ್ ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ನಾಗರೀಕ ವಿಮಾನಯಾನ ಪ್ರಾಧಿಕಾರ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳು ಬಳಕೆ ಮಾಡುತ್ತಿರುವ ಹಲವು ವಿಮಾನಗಳ ಎಂಜಿನ್ ನಲ್ಲಿ ದೋಷ ಕಂಡುಬಂದಿದ್ದು, ಇದೇ ಕಾರಣಕ್ಕೆ ದೋಷ ಕಂಡುಬಂದಿರುವ ವಿಮಾನಗಳ ಹಾರಾಟವನ್ನು ಮುಂಜಾಗ್ರತಾ ಕ್ರಮವಾಗಿ ಡಿಜಿಸಿಎ ಸ್ಥಗಿತಗೊಳಿಸಿದೆ. ಇನ್ನು ಅಧಿಕಾರಿಗಳು ತಿಳಿಸಿರುವಂತೆ ಎ320 ನಿಯೋ ಏರ್ ಕ್ರಾಫ್ಟ್ ಸಂಸ್ಥೆಯ ಪ್ರಾಟ್ ಅಂಡ್ ವಿಟ್ನಿ ಎಂಜಿನ್ ಗಳಲ್ಲಿ ದೋಷ ಕಂಡು ಬಂದಿದ್ದು, ಈ ಬಗ್ಗೆ ಡಿಜಿಸಿಎಗೆ ಮಾಹಿತಿ ಲಭ್ಯವಾಗಿದ್ದು, ಇದೇ ಕಾರಣಕ್ಕೆ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳ ಒಟ್ಟು 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವಂತೆ ಸೂಟನೆ ನೀಡಿದೆ.
ಡಿಜಿಸಿಎ ಮೂಲಗಳ ಪ್ರಕಾರ ಇಂಡಿಗೋ ವಿಮಾನಯಾನ ಸಂಸ್ಥೆಯೊಂದರ ಬಳಿಯಲ್ಲೇ 8 ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ ವಿಮಾನಗಳಿದ್ದು, ಗೋ ಏರ್ ಸಂಸ್ಥೆಯ ಬಳಿ 3 ವಿಮಾನಗಳಿವೆ ಎಂದು ತಿಳಿದುಬಂದಿದೆ. ಇದೀಗ ತಾತ್ಕಾಲಿಕವಾಗಿ ಈ ಎಲ್ಲ 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಡಿಜಿಸಿಎ ನೀಡಿರುವ ಮಾಹಿತಿಯನ್ವಯ ಪ್ರಾಟ್ ಅಂಜ್ ವಿಟ್ನಿ ಎಂಜಿನ್ ಹೊಂದಿರುವ ವಿಮಾನಗಳಲ್ಲಿ ಮಾರ್ಗಮಧ್ಯೆ ದೋಷ ಕಂಡುಬಂದಿದ್ದು, ಇದು ಗಂಭೀರ ಪ್ರಕರಣವಾಗಿದೆ. ಹೀಗಾಗಿ ಈ ಬಗ್ಗೆ ಇತರೆ ವಿಮಾನಗಳಲ್ಲಿ ಶೋಧ ನಡೆಸಿದಾಗ ಇಜದೇ ರೀತಿಯ ಎಂಜಿನ್ ಗಳನ್ನು ಹೊಂದಿರುವ 11 ವಿಮಾನಗಳ ಎಂಜಿನ್ ನಲ್ಲೂ ದೋಷ ಕಂಡುಬಂದಿತ್ತು. ಹೀಗಾಗಿ ಎ320 ನಿಯೋದ ಪಿಡಲ್ಯೂ100 ಎಂಜಿನ್ ಹೊಂದಿರುವ ವಿಮಾನಗಳ ಹಾರಾಟವನ್ನು ಸ್ಥಗಿತಹಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಇರಾನ್ ನಲ್ಲಿ, ಇಂದು ನೇಪಾಳದಲ್ಲಿ ಬೊಂಬಾರ್ಡಿಯರ್ ವಿಮಾನಗಳ ಪತನವಾಗಿತ್ತು. ಈ ಹಿನ್ನಲೆಯಲ್ಲಿ ದೇಶದ ವಿಮಾನಗಳ ವಸ್ತುಸ್ಥಿತಿ ವರದಿಗಾಗಿ ಶೋಧ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


