ದೇಶ

ಕೂಡಲೇ ವಿದ್ಯಾರ್ಥಿಗಳ ಆಪ್ತ ಸಲಹಾ ಕೇಂದ್ರ ಸ್ಥಾಪಿಸಬೇಕು : ವಿಶ್ವವಿದ್ಯಾಲಯಗಳಿಗೆ ಯುಜಿಸಿ ಆದೇಶ

ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯಗಳ ಆವರಣ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೂಡಲೇ ವಿದ್ಯಾರ್ಥಿಗಳ ಆಪ್ತ ಸಲಹಾ ಕೇಂದ್ರ ಸ್ಥಾಪಿಸುವಂತೆ ಯುಜಿಸಿ ಆದೇಶ ಹೊರಡಿಸಿದೆ.

ಕೂಡಲೇ ವಿದ್ಯಾರ್ಥಿಗಳ ಆಪ್ತ ಸಲಹಾ ಕೇಂದ್ರ ಸ್ಥಾಪಿಸಬೇಕು : ವಿಶ್ವವಿದ್ಯಾಲಯಗಳಿಗೆ ಯುಜಿಸಿ ಆದೇಶ
ಯುಜಿಸಿ ಕೇಂದ್ರ ಕಚೇರಿ
Published On :

ಬೆಂಗಳೂರು: ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯಗಳ ಆವರಣ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ  ಕೂಡಲೇ ವಿದ್ಯಾರ್ಥಿಗಳ ಆಪ್ತ ಸಲಹಾ ಕೇಂದ್ರ  ಸ್ಥಾಪಿಸುವಂತೆ ಯುಜಿಸಿ ಆದೇಶ ಹೊರಡಿಸಿದೆ.

Ragging ಮತ್ತಿತರ ಕಿರುಕುಳ ಪ್ರಕರಣಗಳಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಆಪ್ತ ಸಲಹಾ ಕೇಂದ್ರ  ಸ್ಥಾಪಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.  

ವಿದ್ಯಾರ್ಥಿಗಳ ಸುರಕ್ಷತೆ ನಿಟ್ಟಿನಲ್ಲಿ ಯುಜಿಸಿ ಮಾರ್ಗದರ್ಶದಂತೆ ಈ ಕೇಂದ್ರಗಳ ಸ್ಥಾಪನೆಯಾಗುತ್ತಿದ್ದು, ಎಲ್ಲಾ ಸಂಸ್ಥೆಗಳಿಗೂ ಈಗಾಗಲೇ ಆದೇಶ ರವಾನೆಯಾಗಿದೆ. ತೊಂದರೆ ಎದುರಿಸುವ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಸಲಹೆ ನೀಡುವ ಕೇಂದ್ರಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಹೊಂದಿರಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಇಂತಹ ಆಪ್ತ ಸಲಹಾ ಕೇಂದ್ರದಲ್ಲಿ ಮಾನಸಿಕ ಒತ್ತಡಕ್ಕೊಳಗಾದ ವಿದ್ಯಾರ್ಥಿಯನ್ನೊಳಗೊಂಡಂತೆ  ಉಪಾಧ್ಯಾಯರು, ಪೋಷಕರೊಂದಿಗೆ ಸಂವಾದ ನಡೆಸಿ, ಅಕಾಡೆಮಿಕ್ ತೊಂದರೆಯಿಂದ ಹೊರಬರುವಂತೆ ಸೂಕ್ತ, ಸಲಹೆ, ಸೂಚನೆ ನೀಡುವಂತೆಯೂ ನಿರ್ದೇಶನ ನೀಡಲಾಗಿದೆ.

ಮಾನಸಿಕ ಖಿನ್ನತೆಕ್ಕೊಳಗಾಗಿರುವ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಸಂಪರ್ಕದಲ್ಲಿರುವ ಮೂಲಕ ಪೋಷಕರಂತೆ ಸಲಹೆ ನೀಡಬೇಕು, ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಿತ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿ, ಆತನ ಭವಿಷ್ಯ ರೂಪಿಸುವತ್ತ ಮಾರ್ಗದರ್ಶನ ನೀಡುವಂತೆಯೂ ಯುಜಿಸಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.