ರಾಜ್ಯಸಭೆ ಚುನಾವಣೆ: ಹಿಮಾಚಲ ಪ್ರದೇಶದಿಂದ ಜೆ.ಪಿ ನಡ್ಡಾ ನಾಮಪತ್ರ ಸಲ್ಲಿಕೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ ಗುರುವಾರ ರಾಜ್ಯಸಭೆ ಚುನಾವಣೆಗಾಗಿ ಹಿಮಾಚಲ ಪ್ರದೇಶದಿಂದ ಭಾರತೀಯ ಜನತಾ ಪಕ್ಷದಿಂದ ...

Published On :
ಶಿಮ್ಲಾ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ ಗುರುವಾರ ರಾಜ್ಯಸಭೆ ಚುನಾವಣೆಗಾಗಿ ಹಿಮಾಚಲ ಪ್ರದೇಶದಿಂದ ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಜೆ.ಪಿ ನಡ್ಡಾ, ತಮ್ಮ ತವರು ರಾಜ್ಯವಾದ ಹಿಮಾಚಲ ಪ್ರದೇಶದಿಂದ ಮೇಲ್ಮನೆಗೆ ಪುನಾರಾಯ್ಕೆ ಬಯಸಿದ್ದಾರೆ.
ರಾಜ್ಯಸಭೆಯಲ್ಲಿ 59 ಸ್ಥಾನಗಳಿದ್ದು, ಬಿಜೆಪಿಯ 17 ಕಾಂಗ್ರೆಸ್ ನ 12 ಸಂಸದರ ಅವಧಿ ಏಪ್ರಿಲ್ ಗೆ ಕೊನೆಯಾಗಲಿದೆ. ನಟಿ ರೇಖಾ, ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ಸಮಾಜ ಕಾರ್ಯಕರ್ತೆ ಅನು ಆಗಾ ನಿವೃತ್ತರಾಗಲಿದ್ದಾರೆ. 17 ರಾಜ್ಯಸಭೆ ಸದಸ್ಯರಲ್ಲಿ 8 ಮಂದಿ ಕೇಂದ್ರ ಸಚಿವರಿದ್ದಾರೆ.
ಹಣಕಾಸು ಸಚಿವ ಅರುಣ್ ಜೈಟ್ಲಿ ಉತ್ತರ ಪ್ರದೇಶದಿಂದ ಮತ್ತು ರವಿಶಂಕರ್ ಪ್ರಸಾದ್ ಬಿಹಾರದಿಂದ ಸ್ಪರ್ಧಿಸಲಿದ್ದಾರೆ, ಪ್ರಕಾಶ್ ಜಾವ್ಡೇಕರ್ ಮಹಾರಾಷ್ಟ್ರದಿಂದ ಭೂಪಿಂದರ್ ಯಾದವ್ ರಾಜಸ್ತಾನದಿಂದ ನಾಮಪತ್ರ ಸಲ್ಲಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


