ರಿವರ್ಸ್ ಹರಾಜು ಬಿಡ್ಡಿಂಗ್ ಗೆ ರೈಲ್ವೆ ಒಲವು; ಏ.1ರಿಂದ ಜಾರಿ: ವರ್ಷಕ್ಕೆ 10 ಸಾವಿರ ಕೋಟಿ ಉಳಿಸುವ ಗುರಿ
ಸ್ಪರ್ಧೆಯನ್ನು ಹೆಚ್ಚಿಸಲು ಮತ್ತು ಸಂಗ್ರಹಣೆ ವೆಚ್ಚ ತಗ್ಗಿಸಲು ಭಾರತೀಯ ರೈಲ್ವೆ ಇಲಾಖೆ ವಿದ್ಯುನ್ಮಾನ ...

ನವದೆಹಲಿ: ಸ್ಪರ್ಧೆಯನ್ನು ಹೆಚ್ಚಿಸಲು ಮತ್ತು ಸಂಗ್ರಹಣೆ ವೆಚ್ಚ ತಗ್ಗಿಸಲು ಭಾರತೀಯ ರೈಲ್ವೆ ಇಲಾಖೆ ವಿದ್ಯುನ್ಮಾನ ರಿವರ್ಸ್ ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರಲಿದೆ. ಏಪ್ರಿಲ್ 1ರಿಂದ ಅಧಿಕ ಮೌಲ್ಯದ ವಸ್ತುಗಳಿಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ರಾಷ್ಟ್ರೀಯ ಸಾರಿಗೆ ವಿದ್ಯುನ್ಮಾನ ಹರಾಜು ಪ್ರಕ್ರಿಯೆ ದೇಶದಲ್ಲಿಯೇ ಇದು ಮೊದಲಾಗಿದೆ. ಇದರಿಂದ ವರ್ಷಕ್ಕೆ 10,000 ಕೋಟಿ ರೂಪಾಯಿಗಳಷ್ಟು ಉಳಿತಾಯ ಮಾಡುವುದು ಇಲಾಖೆಯ ಉದ್ದೇಶ.
ವೇಗನ್, ಲೊಕೊಮೊಟಿವ್ ಮತ್ತು ಬೋಗಿಗಳ ಭಾಗಗಳು, ಸಿಗ್ನಲಿಂಗ್ ಮತ್ತು ಹಳಿ ಉಪಕರಣಗಳು, ಸಿಮೆಂಟ್ ಇತ್ಯಾದಿಗಳ ಖರೀದಿಗೆ ರಿವರ್ಸ್ ಹರಾಜು ಅನ್ವಯವಾಗುತ್ತದೆ. ಇದರಲ್ಲಿ ರೈಲ್ವೆ ಇಲಾಖೆಯ ಕೆಲಸಗಳು, ಸೇವೆಗಳು ಮತ್ತು ಎಲ್ಲಾ ಉತ್ಪಾದನೆ ಘಟಕಗಳನನು ಕೂಡ ಒಳಗೊಂಡಿರುತ್ತದೆ.
ರೈಲ್ವೆ ಇಲಾಖೆ ಪ್ರತಿವರ್ಷ ಸುಮಾರು 50 ಸಾವಿರ ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಣೆ ಮಾಡುತ್ತದೆ. ಅಲ್ಲದೆ 10,000 ಕೋಟಿ ರೂಪಾಯಿ ಬೆಲೆಬಾಳುವ ಹಳಿ ಪೂರೈಕೆ ವಸ್ತುಗಳನ್ನು ಸಂಗ್ರಹಿಸುತ್ತದೆ. ಇನ್ನು 60,000 ಕೋಟಿ ರೂ ಬೆಲೆಬಾಳುವ ಯೋಜನೆಗಳನ್ನು ರೈಲ್ವೆ ಮೂಲಭೂತಸೌಕರ್ಯಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸುವಿಕೆಗೆ ಕೈಗೊಳ್ಳುತ್ತದೆ.
ಆರಂಭದಲ್ಲಿ ಎಲ್ಲಾ ಪೂರೈಕೆ ಟೆಂಡರ್ ಗಳನ್ನು 10 ಕೋಟಿ ರೂಪಾಯಿಯಲ್ಲಿ ಎಲೆಕ್ಟ್ರಾನಿಕ್ ರಿವರ್ಸ್ ಆಕ್ಷನ್ ನಲ್ಲಿ ಸೇರಿಸಲಾಗುತ್ತದೆ. ಅದೇ ರೀತಿ ಎಲ್ಲಾ ಸೇವೆಗಳು ಮತ್ತು ಕೆಲಸಗಳನ್ನು 50 ಕೋಟಿ ರೂಪಾಯಿಗಿಂತ ಹೆಚ್ಚಿನದರಲ್ಲಿ ಸೇರಿಸಲಾಗುವುುದ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕ್ರಿಯೆ ಏಪ್ರಿಲ್ 1ರಂದು ಆರಂಭವಾಗಲಿದ್ದು ಶೇಕಡಾ 70ಕ್ಕಿಂತ ಹೆಚ್ಚು ಸಂಗ್ರಹಣೆ ವೆಚ್ಚ ಮತ್ತು ಕೆಲಸವನ್ನು ಒಳಗೊಂಡಿರಲಿದೆ ಎಂದು ಅವರು ಹೇಳಿದ್ದಾರೆ.
ಸ್ಪರ್ಧಾತ್ಮಕ ಬೆಲೆಯಲ್ಲಿ ಪೂರೈಕೆಯನ್ನು ಸಂಗ್ರಹಿಸಲು ಇಂದು ಸರ್ಕಾರದ ಹಲವು ಸಚಿವಾಲಯಗಳು ರಿವರ್ಸ್ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


