ಮರ್ಯಾದಾ ಹತ್ಯೆ ತಡೆಗಟ್ಟಲು ಪ್ರಬಲ ಕಾನೂನು ಜಾರಿ ಆಗಬೇಕು: ಸುಪ್ರೀಂ ಕೋರ್ಟ್ ಗೆ ಕೇಂದ್ರ
ಯಾವುದೇ ತನಿಖಾರ್ಹ ಅಪರಾಧಗಳಲ್ಲಿ ಭಾಗಿಗಳಾದವರ ವಿರುದ್ಧ ಪೋಲೀಸ್ ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸುವ ಸಲುವಾಗಿ ಕೇಂದ್ರ ಸರ್ಕಾರ ಕಾನೂನು ರೂಪಿಸಲು ಉದ್ದೇಶಿಸಿದೆ ಎಂದು ......

Published On :
ನವದೆಹಲಿ: ಯಾವುದೇ ತನಿಖಾರ್ಹ ಅಪರಾಧಗಳಲ್ಲಿ ಭಾಗಿಗಳಾದವರ ವಿರುದ್ಧ ಪೋಲೀಸ್ ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸುವ ಸಲುವಾಗಿ ಕೇಂದ್ರ ಸರ್ಕಾರ ಕಾನೂನು ರೂಪಿಸಲು ಉದ್ದೇಶಿಸಿದೆ ಎಂದು ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ವೈವಾಹಿಕ ಜೀವನದಲ್ಲಿ ಸ್ವಾತಂತ್ರದ ಮೇಲಿನ ಹಸ್ತಕ್ಷೇಪ ನಿಷೇಧ ಮಸೂದೆ ಪ್ರಸ್ತಾಪದಡಿಯಲ್ಲಿ ಕೋರ್ಟ್ ಇಪ್ಪತ್ತಮೂರು ರಾಜ್ಯಗಳ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದು ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠಕ್ಕೆ ಸರ್ಕಾರ ತನ್ನ ನಿಲುವನ್ನು ತಿಳಿಸಿದೆ.
ಆಯಾ ರಾಜ್ಯಗಳ ಕಾನೂನು ಸುವ್ಯವಸ್ಥೆಯ ಹೊಣೆ ರಾಜ್ಯ ಸರ್ಕಾರಗಳ ಜವಾಬ್ದಾರಿ ಆಗಿದ್ದೂ ಇದಾಗಲೇ ಮದುವೆಯಾಗಿರುವ ಅಥವಾ ವಿವಾಹವಾಗಲು ಇಚ್ಚೆ ಇರುವ ಜೋಡಿಗಳ ಬದುಕಲ್ಲಿ ಹಸ್ತಕ್ಷೇಪ ನಡೆಸುವ ಅಪರಾಧಕ್ಕೆ ಸಂಬಂಧಿಸಿ ಅಪರಾಧಗಳನ್ನು ತಡೆಯಲು ಪೋಲೀಸರಿಗೆ ಕೇಂದ್ರವು ಆದೇಶ ನಿಡಬಹುದಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಅರಿಕೆ ಮಾಡಿದೆ.
ವಿವಾಹವಾಗಬಯಸುವ ಅಥವಾ ವಿವಾಹವಾಗಿರುವ ಜೋಡಿಗಳಿಗೆ ಯಾವುದೇ ರೀತಿಯಲ್ಲಿ ಭಯವಿಲ್ಲದೆ ಜೀವನ ಸಾಗಿಸಲು ಪೋಲೀಸರು ಸೂಕ್ತ ರಕ್ಷಣೆಯ ಭರವಸೆ ನೀಡಬೇಕು. ವೈವಾಹಿಕ ಜೋಡಿಗಳ ಮೇಲಿನ ಹಲ್ಲೆ ಪ್ರಕರಣಗಳು ಅಥವಾ ಇನ್ನಿತರೆ ದೂರುಗಳನ್ನು ಪಡೆಯುವ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ಪೋಲೀಸ್ ಸೆಲ್ ಸ್ಥಾಪಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಬೇಕೆಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ಒತ್ತಾಯಿಸಿದೆ.
ಮರ್ಯಾದಾ ಹತ್ಯೆಯ ತಡೆಗಟ್ಟುವಿಕೆ ಹಾಗೂ ಖಾಪ್ ಪಂಚಾಯತ್ ಗಳಿಂದಾಗುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಗ್ರಹಿಸುವ, ಪ್ರಾಪ್ತ ವಯಸ್ಕರು ವಿವಾಹವಾಗಲು, ವೈವಾಹಿಕ ಜೀವನ ನಡೆಸಲು ಯಾವ ತೊಂದರೆಯಾಗದಂತೆ ರಕ್ಷಣೆ ನಿಡಬೇಕೆಂದು ಕೋರಿ ಶಕ್ತಿ ವಾಹಿನಿ ಎನ್ ಜಿಒ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಈ ಸಂಬಂಧ ತೀರ್ಪು ನೀಡಿದ ನ್ಯಾಯಾಲಯ ಇಬ್ಬರ ಒಪ್ಪಿಗೆ ಇದ್ದ ಪಕ್ಷದಲ್ಲಿ ಅವರು ಯಾವ ಧರ್ಮ, ಜಾತಿ, ಮತ ಸಂಬಂಧದವರಾದರೂ ಅವರ ವಿವಾಹಕ್ಕೆ ಯಾರೂ ಅಡ್ಡಿ ಪಡಿಸಬಾರದು. ಅವರ ವೈವಆಹಿಕ ಜೀವನದಲ್ಲಿ ಯಾವ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಖಾಪ್ ಪಂಚಾಯತ್ ಗಳು ತಾವು ಸಮಾಜದ ಆತ್ಮಸಾಕ್ಷಿಯಂತೆ ಕಾರ್ಯನಿರ್ವಹಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಫೆ.5ರ ತೀರ್ಪಿನಲ್ಲಿ ಹೇಳಿದ್ದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂ ಕೋರ್ಟ್ಕಾನೂನುhonour killingಮರ್ಯಾದಾ ಹತ್ಯೆlawThe Prohibition of Interference with Freedom of Matrimonial Alliance Billವೈವಾಹಿಕ ಜೀವನದಲ್ಲಿ ಸ್ವಾತಂತ್ರದ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


