ದೇಶ

ಹಣ ಬಲ, ಮಾಧ್ಯಮಗಳ ಅಪಪ್ರಚಾರ ಎಡಪಕ್ಷ ಸೋಲಿಗೆ ಕಾರಣ: ಮಾಣಿಕ್ ಸರ್ಕಾರ್

ಊಹಿಸಲಾಗದಷ್ಟು ಹಣ ಬಲ ಮತ್ತು ಮಾಧ್ಯಮಗಳ ನಿರಂತರ ಅಪಪ್ರಚಾರವೇ ಸಿಪಿಐಎಂ ನೇತೃತ್ವದ ಎಡಪಕ್ಷ...

ಹಣ ಬಲ, ಮಾಧ್ಯಮಗಳ ಅಪಪ್ರಚಾರ ಎಡಪಕ್ಷ ಸೋಲಿಗೆ ಕಾರಣ: ಮಾಣಿಕ್ ಸರ್ಕಾರ್
ಮಾಣಿಕ್ ಸರ್ಕಾರ್
Published On :
ಅಗರ್ತಾಲ: ಊಹಿಸಲಾಗದಷ್ಟು ಹಣ ಬಲ ಮತ್ತು ಮಾಧ್ಯಮಗಳ ನಿರಂತರ ಅಪಪ್ರಚಾರವೇ ಸಿಪಿಐಎಂ ನೇತೃತ್ವದ ಎಡಪಕ್ಷ ಸೋಲಿಗೆ ಕಾರಣ ಎಂದು ತ್ರಿಪುರದ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಸೋಮವಾರ ಆರೋಪಿಸಿದ್ದಾರೆ.
ವಿಧಾನಸಭೆ ಚುವಾವಣೆ ಫಲಿತಾಂಶ ಅನಿರೀಕ್ಷಿತ ಮತ್ತು ಎಡ ಪಕ್ಷ ಸರ್ಕಾರ ಕೆಳಗಿಳಿಸಲು ಬಿಜೆಪಿ ಯಾವ ರೀತಿ ಹಣ ಮತ್ತು ಕೇಂದ್ರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಸರ್ಕಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಎಂಜಿಎನ್ ಆರ್ ಇಜಿಎ ಮತ್ತು ವಸತಿ ಯೋಜನೆಗಳಿಗೆ ಹಣ ಹಂಚಿಕೆಯನ್ನು ಕಡಿಮೆ ಮಾಡುವ ಮೂಲಕ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ದಿಗ್ಬಂಧ ವಿಧಿಸಿತ್ತು ಎಂದು ಮಾಣಿಕ್ ಸರ್ಕಾರ್ ಆರೋಪಿಸಿದ್ದಾರೆ.
ಸಿಪಿಐ-ಎಂ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದು ಚುನಾವಣೆ ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ಅವಲೋಕನ ಮಾಡಲಾಗುವುದು ಎಂದು ಬಡ ನಿರ್ಗಮಿತ ಮುಖ್ಯಮಂತ್ರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.