ದೇಶ

ಹಲ್ಲೆ ಆರೋಪ: ಗಾಯಕಿ ಪಾಲಾಕ್ ಸಹೋದರ ಪಾಲಾಶ್ ವಿರುದ್ಧ ಎಫ್ಐಆರ್

ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಗಾಯಕಿ ಪಾಲಾಕ್ ಮುಖಾಲ್ ಸಹೋದರ ಪಾಲಾಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಸ್ಪಷ್ಟಪಡಿಸಿದ್ದಾರೆ...

ಹಲ್ಲೆ ಆರೋಪ: ಗಾಯಕಿ ಪಾಲಾಕ್ ಸಹೋದರ ಪಾಲಾಶ್ ವಿರುದ್ಧ ಎಫ್ಐಆರ್
ಗಾಯಕಿ ಪಾಲಾಕ್, ಸಹೋದರ ಪಾಲಾಶ್
Published On :
ಆಗ್ರ: ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಗಾಯಕಿ ಪಾಲಾಕ್ ಮುಖಾಲ್ ಸಹೋದರ ಪಾಲಾಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 
ಆಗ್ರದಲ್ಲಿ ಫೆಬ್ರವರಿಯಲ್ಲಿ ನಡೆದ ತಾಜ್ ಮಹೋತ್ಸವವನ್ನು ಆಯೋಜಿಸಿದ್ದ ಸಮಿತಿಯ ಸದಸ್ಯಯ ಮೇಲೆ ಹಲ್ಲೆ ಮಾಡಿದ ಆರೋಪ ಪಾಲಾಶ್ ಮೇಲಿದೆ. ಇನ್ನು ಪಾಲಾಶ್ ವಿರುದ್ಧ ಐಪಿಸಿ ಸೆಕ್ಷನ್ 323, 504, 506, 332, 427ರ ಅಡಿಯಲ್ಲಿ ಕೇಸ್ ದಾಖಲಿಸಲಾಗದೆ ಎಂದು ಪೊಲೀಸ್ ಅಧಿಕಾರಿ ಶೈಲೇಂದ್ರ ಸಿಂಗ್ ಹೇಳಿದ್ದಾರೆ. 
ಫೆಬ್ರವರಿ 27ರಂದು ನಡೆದ ಸಮಾರಂಭದ ವೇಳೆ ಪಾಲಾಕ್ ತಾಯಿಗೆ ಸರಿಯಾಗಿ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಪಾಲಾಶ್ ಸಮಿತಿಯ ಸದಸ್ಯ ಸುಧೀರ್ ನರೈನ್ ಮೇಲೆ ಹಲ್ಲೆ ಮಾಡಿದ್ದರು. 
ಇನ್ನು ಪ್ರಕರಣ ಸಂಬಂಧ ಸಮಿತಿಯ ಸದಸ್ಯ ಸುಧೀರ್ ನರೈನ್ ಪಾಲಾಶ್ ನನಗೆ ಕಪಾಳಮೋಕ್ಷ ಹಾಗೂ ಜೀವ ಬೆದರಿಕೆ ಹಾಕಿದ್ದರು ಎಂದು ದೂರು ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.