ದೇಶ

ಸ್ವಿಸ್ ಬ್ಯಾಂಕ್'ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಏರಿಕೆ: ಪ್ರಧಾನಿ ಮೋದಿಗೆ ರಾಹುಲ್ ತಿರುಗೇಟು

ಕಪ್ಪುಕುಳಗಳ ಸ್ವರ್ಗವೆಂದೇ ಬಿಂಬಿತವಾಗಿರುವ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಹೊಂದಿರುವ ಹಣದ ಪ್ರಮಾಣ 2017ನೇ ಸಾಲಿನಲ್ಲಿ ಶೇ.50ರಷ್ಟು ಹೆಚ್ಚಾಗಿ ರೂ.7000 ಕೋಟಿ ತಲುಪಿದೆ ಎಂದ ವರದಿಯನ್ನಿಟ್ಟುಕೊಂಡು...

ಸ್ವಿಸ್ ಬ್ಯಾಂಕ್'ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಏರಿಕೆ: ಪ್ರಧಾನಿ ಮೋದಿಗೆ ರಾಹುಲ್ ತಿರುಗೇಟು
ಸಂಗ್ರಹ ಚಿತ್ರ
Published On :
ನವದೆಹಲಿ: ಕಪ್ಪುಕುಳಗಳ ಸ್ವರ್ಗವೆಂದೇ ಬಿಂಬಿತವಾಗಿರುವ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಹೊಂದಿರುವ ಹಣದ ಪ್ರಮಾಣ 2017ನೇ ಸಾಲಿನಲ್ಲಿ ಶೇ.50ರಷ್ಟು ಹೆಚ್ಚಾಗಿ ರೂ.7000 ಕೋಟಿ ತಲುಪಿದೆ ಎಂದ ವರದಿಯನ್ನಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಚಾಟಿ ಬೀಸಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, 2014ರಲ್ಲಿ ಮೋದಿ ಹೇಳಿದ್ದರು; ಸ್ವಿಸ್ ಬ್ಯಾಂಕುಗಳಿಂದ ಎಲ್ಲಾ ಕಪ್ಪು ಹಣವನ್ನು ತಂದು ಪ್ರತೀಯೊಬ್ಬ ಭಾರತೀಯ ಖಾತೆಗೆ ರೂ.15 ಲಕ್ಷ ಹಾಕುವೆ ಎಂದು. 2016ರಲ್ಲಿ ಹೇಳಿದ್ದರು; ಕಪ್ಪು ಹಣ ವ್ಯವಸ್ಥೆಯನ್ನು ಅಪನಗದೀಕರಣ ನಿವಾರಿಸಲಿದೆ ಎಂದು. 2018ರಲ್ಲಿ ಹೇಳುತ್ತಿದ್ದಾರೆ; ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ಠೇವಣಿ ಶೇ.50ರಷ್ಟು ಏರಿಕೆಯಾಗಿದೆ ಎಂದು. ಅದು ಸಂಪೂರ್ಣ ಬಿಳಿ ಹಣ. ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣವೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದರಂತೆ ಕಾಂಗ್ರೆಸ್ ಕೂಡ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ಠೇವಣಿ ಕುಸಿತವಾಗಿತ್ತು. ಮೋದಿ ಅವರ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. 
ಶೇ.50ರಷ್ಟು ಏರಿಕೆಯಾಗಿರುವುದು 2004ರ ನಂತರ ಇದೇ ಮೊದಲು. ವಿದೇಶದಲ್ಲಿ ರೂ.80 ಲಕ್ಷ ಕೋಟಿ ಕಪ್ಪು ಹಣ ತಂದು ಪ್ರತೀಯೊಬ್ಬ ಭಾರತೀಯರ ಬ್ಯಾಂಕ್ ಖಾತೆಗೆ ರೂ.15 ಲಕ್ಷ ಹಾಕುವ ಭರವಸೆ ಏನಾಯಿತು ಎಂದು ಕಾಂಗ್ರೆಸ್ ವಕ್ತಾರ ಆರ್'ಪಿಎನ್ ಸಿಂಗ್ ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.