ಸುಲಿಗೆ ಪ್ರಕರಣ: ದಾವೂದ್, ಇಕ್ಬಾಲ್ ಕಸ್ಕರ್, ಅನೀಸ್ ಇಬ್ರಾಹಿಂ ವಿರುದ್ಧ ಜಾರ್ಜ್ ಶೀಟ್!
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ದಾವೂದ್ ಇಬ್ರಾಹಿಂ, ಇಕ್ಬಾಲ್ ಕಸ್ಕರ್ ಮತ್ತು ಅನೀಸ್ ಇಬ್ರಾಹಿಂ ವಿರುದ್ಧ ಥಾಣೆ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ...

Published On :
ಮುಂಬೈ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ದಾವೂದ್ ಇಬ್ರಾಹಿಂ, ಇಕ್ಬಾಲ್ ಕಸ್ಕರ್ ಮತ್ತು ಅನೀಸ್ ಇಬ್ರಾಹಿಂ ವಿರುದ್ಧ ಥಾಣೆ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ.
ಕಳೆದ ವರ್ಷ ಬಿಲ್ಡರ್ ಒಬ್ಬರು ದೂರು ನೀಡಿದ್ದು ಈ ಸಂಬಂಧ ಈ ಮೂವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿರುವ ಸುಲಿಗೆ ನಿಗ್ರಹ ದಳ(ಎಇಸಿ)ದ ಥಾಣೆಯ ಹಿರಿಯ ಇನ್ಸ್ ಪೆಕ್ಟರ್ ನೇರವಾಗಿ ಜಿಲ್ಲಾ ಕೋರ್ಟ್ ಗೆ ಸಲ್ಲಿಸಿದ್ದಾರೆ.
ಸುಲಿಗೆ ಪ್ರಕರಣದ ಆರೋಪದಡಿಯಲ್ಲಿ ಕೇಂದ್ರ ಮುಂಬೈನ ನಾಗಪಾದ್ ಪ್ರದೇಶದಲ್ಲಿರುವ ಇಕ್ಬಾಲ್ ಕಸ್ಕರ್ ನಿವಾಸದಿಂದಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಎನ್ ಕೌಂಟರ್ ಸ್ಪೆಷಲಿಸ್ಟ್ ಮತ್ತು ಸುಲಿಗೆ ನಿಗ್ರಹ ದಳದ ಹಿರಿಯ ಅಧಿಕಾರಿ ಇನ್ಸ್ ಪೆಕ್ಟರ್ ಪ್ರದೀಪ್ ಶರ್ಮಾ ಅವರ ನೇತೃತ್ವದಲ್ಲಿ ಕಳೆದ ಸೆಪ್ಟೆಂಬರ್ 18ರ ತಡರಾತ್ರಿ ದಾಳಿ ಮಾಡಿ ಆತನನ್ನು ಬಂಧಿಸಿದ್ದರು.
ಮುಂಬೈನ ಥಾಣೆ ಮೂಲದ ಉದ್ಯಮಿಯೊಬ್ಬರಿಗೆ ಕೆಲ ಅನಾಮಧೇಯ ವ್ಯಕ್ತಿಗಳು ತಾವು ಇಕ್ಬಾಲ್ ಅನ್ಸಾರಿ ಹುಡುಗರು ಎಂದು ಹೇಳಿ ಬೆದರಿಕೆ ಕರೆಗಳನ್ನು ಮಾಡಿದ್ದು ಈ ಬಗ್ಗೆ ಉದ್ಯಮಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.
ಉದ್ಯಮಿ ತನ್ನ ದೂರಿನಲ್ಲಿ ಗೊರೈ ಪ್ರದೇಶದಲ್ಲಿರುವ 38 ಎಕರೆ ಜಮೀನು ಸಂಬಂಧ 3 ಕೋಟಿ ರುಪಾಯಿ ನೀಡುವಂತೆ ಬೆದರಿಕೆ ಕರೆ ಮಾಡಿದ್ದಾರೆ ಎಂದು ದೂರಿದ್ದರು. ಈ ಸಂಬಂಧ ಇಕ್ಬಾಲ್ ಕಸ್ಕರ್ ವಿರುದ್ಧ ಐಪಿಸಿ ಸೆಕ್ಷನ್ 384, 386, 387ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
charge sheetಚಾರ್ಜ್ ಶೀಟ್Dawood Ibrahimದಾವೂದ್ ಇಬ್ರಾಹಿಂIqbal Kaskarಇಕ್ಬಾಲ್ ಕಸ್ಕರ್extortion Caseಸುಲಿಗೆ ಪ್ರಕರಣAnees Ibrahimಅನೀಸ್ ಇಬ್ರಾಹಿಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


