ದೇಶ

ಬಿಜೆಪಿ ಅವಧಿಪೂರ್ವ ಚುನಾವಣೆಗೆ ಮುಂದಾಗದು: ಮಲ್ಲಿಕಾರ್ಜುನ ಖರ್ಗೆ

ಪ್ರಸಕ್ತ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ಭಾರತೀಯ ಜನತಾ ಪಕ್ಷವು ಅವಧಿಗೆ ಮುನ್ನ ಲೋಕಸಭೆ ಚುನಾವಣೆಗೆ ತೆರಳುವುದು ಅಸಂಭವ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ

ಬಿಜೆಪಿ ಅವಧಿಪೂರ್ವ ಚುನಾವಣೆಗೆ ಮುಂದಾಗದು: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Published On :
ನವದೆಹಲಿ: ಪ್ರಸಕ್ತ ರಾಜಕೀಯ ಪರಿಸ್ಥಿತಿ ಅವಲೋಕಿಸಿದರೆ ಭಾರತೀಯ ಜನತಾ ಪಕ್ಷವು ಅವಧಿಗೆ ಮುನ್ನ ಲೋಕಸಭೆ ಚುನಾವಣೆಗೆ ತೆರಳುವುದು ಅಸಂಭವ ಎಂದು ಹಿರಿಯ ಕಾಂಗ್ರೆಸ್ ಮುಖಂಡ  ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಬವಾಗುವ ವೇಳೆ ಅವಧಿಗೆ ಮುನ್ನ ಲೀಕಸಭೆ ಚುನಾವಣೆ ನಡೆಸುವ ಕುರಿತಂತೆ ಬಿಜೆಪಿ ನಿಲುವು ಸ್ಪಷ್ಟವಾಗಲಿದೆ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ಖರ್ಗೆ ಹೇಳಿದ್ದಾರೆ.
"ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಲೋಕಸಭೆ ಚುನಾವಣೆ ನಡೆಸುವುದಕ್ಕೆ ಬಿಜೆಪಿ ಚಿಂತನೆ ನಡೆಸಿದೆ. ನವೆಂಬರ್ ನಲ್ಲಿ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಿದೆ. ಮಹಾರಾಷ್ಟ್ರದಂತಹಾ ರಾಜ್ಯಗಳಲ್ಲಿ ವಿಧಾನ ಸಭೆ ಹಾಗೂ ಲೋಕಸಭೆಗೆ ಒಟ್ಟಾಗಿ ಮತದಾನ ನಡೆದರೆ ತನಗೆ ಲಾಭವಾಗಲಿದೆ ಎಂದು ಪಕ್ಷ ಭಾವಿಸಿದೆ. ಆದರೆ ಪ್ರಸಕ್ತ ರಾಜಕೀಯ ಪರಿಸ್ಥಿತಿ ನೋಡಿದರೆ ಬಿಜೆಪಿ ತಾನು ಅವಧಿಗೆ ಮುನ್ನ ಲೋಕಸಭೆ ಚುನಾವಣೆ ಗೆ ತೆರಳುವುದು ಅಸಂಭವ ಎನಿಸಿದೆ" ನವದೆಹಲಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಖರ್ಗೆ ಹೇಳಿದರು.
ಸಧ್ಯ ಬಿಜೆಪಿ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಎಂದ ಖರ್ಗೆ 2014 ರ ಸಾರ್ವತ್ರಿಕ ಚುನಾವಣೆಗಿಂತ ಮುನ್ನ ಬಿಜೆಪಿ ತಾನು ನೀಡಿದ್ದ ಭರವಸೆಯನ್ನು ಸ<ಪೂರ್ಣವಾಗಿ ಈಡೇರಿಸಲಿಲ್ಲ. ಹಾಗೆಯೇ ಸರ್ಕಾರದ ಸಾಧನೆ ಕುರಿತಂತೆ ಮಾತನಾಡಲು ಅವರಲ್ಲಿ ಸಾಕಷ್ಟು ವಿಷಯಗಳಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.
ಗುರುವಾರ ಮಾದ್ಯಮದ ಜತೆ ಮಾತನಾಡಿದ್ದ ಮಾಜಿ  ಪ್ರಧಾನಿ ಜಾತ್ಯತೀತ ಜನತಾ ದಳದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಬಿಜೆಪಿಯು ಅವಧಿಪೂರ್ವ ಚುನಾವಣೆಗೆ ಅಣಿಯಾಗುತ್ತಿದೆ.ಕೇಸರಿ ಪಕ್ಷವನ್ನು ಹಣಿಯಲು ನಾವುಗಳು ಆದಷ್ಟು ಶೀಘ್ರದಲ್ಲಿ ತೃತೀಯ ರಂಗ ರಚನೆ ಮಾಡಬೇಕಿದೆ ಎಂದಿದ್ದರು. ಮುಂಗಾರು ಅಧಿವೇಶನವು ಈ ಲೋಕಸಭೆಯ ಕೊನೆಯ ಅಧಿವೇಶನವಾಗಲಿದೆ  ಎಂದು ಅವರು ಅಭಿಪ್ರಾಯಪಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.