ನೆರೆಯವರ ಕಿರುಕುಳದಿಂದ ನನ್ನ ಮಕ್ಕಳನ್ನು ರಕ್ಷಿಸಿ: ನಾಲ್ಕು ಹೆಣ್ಮಕ್ಕಳ ತಂದೆಯಿಂದ ಪ್ರಧಾನಿ, ಯೋಗಿಗೆ ಪತ್ರ!
ತನ್ನ ನಾಲ್ವರು ಪುತ್ರಿಯರಿಗೆ ಕಿರುಕುಳ ನೀಡುವವರಿಂದ ರಕ್ಷಣೆ ನಿಡಬೇಕೆಂದು ಉತ್ತರ ಪ್ರದೇಶ ಮೀರತ್ ನ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾನೆ!

Published On :
ಮೀರತ್ (ಉತ್ತರ ಪ್ರದೇಶ): ತನ್ನ ನಾಲ್ವರು ಪುತ್ರಿಯರಿಗೆ ಕಿರುಕುಳ ನೀಡುವವರಿಂದ ರಕ್ಷಣೆ ನಿಡಬೇಕೆಂದು ಉತ್ತರ ಪ್ರದೇಶ ಮೀರತ್ ನ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾನೆ!
ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶವೆಂಬ ಥಾಮ್ಸನ್ ರಾಯಿಟರ್ಸ್ ಸಮೀಕ್ಷೆ ಹೊರಬಿದ್ದ ದಿನವೇ ಈ ಪತ್ರ ಬಂದಿದೆ.
ತಮ್ಮ ಮನೆಯ ಅಕ್ಕಪಕ್ಕದ ಯುವಕರು ತನ್ನ ನಾಲ್ವರು ಪುತ್ರಿಯರಿಗೆ ಕಿರುಕುಳ ನೀಡಿತ್ತಿದ್ದಾರೆ ಎಂದು ನಾಲ್ವರು ಹೆಣ್ಣು ಮಕ್ಕಳ ತಂದೆ ಪತ್ರದಲ್ಲಿ ಆರೋಪಿಸಿದ್ದಾರೆ.
ಕಿರುಕುಳ ಯಾವ ಮಟ್ಟದಲ್ಲಿದೆ ಎಂದರೆ ನಾಲ್ವರು ಹೆಣ್ಣು ಮಕ್ಕಳೂ ತಾವು ಮದರಸಾಗೆ ತೆರಳಲು ಹಿಂಜರಿಯುವಂತಾಗಿದೆ ಮತ್ತು ಮನೆಯೊಳಗೇ ಬಂಧಿಯಾಗಿರಬೇಕಾದ ಅನಿವಾರ್ಯ ಸ್ಥಿತಿ ಇದೆ. ಇಷ್ಟಾಗಿ ಮನೆಯೊಳಗೇ ಕುಳಿತರೂ ಸಹ ಅವರ ಕಿರುಕುಳವೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಕೆಲ ಮಂದಿ ನನ್ನ ಮನೆಗೆ ಭೇಟಿ ನೀಡಿದ್ದಲ್ಲದೆ ಮಕ್ಕಳ ಮೇಲೆ ಆಸಿಡ್ ದಾಳಿ ನಡೆಸುವುದಾಗಿ ಬೆದರಿಸಿದ್ದಾರೆ.
ಎ ಎನ್ ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಓರ್ವ ಯುವತಿ "ನೆರೆಯ ಯುವಕರ ಕಿರುಕುಳಕ್ಕೆ ಬೇಸತ್ತು ನಾವು ಮದರಸಾಗೆ ತೆರಳುವುದನ್ನು ನಿಲ್ಲಿಸಿದ್ದೇವೆ. ಇಷ್ಟಾಗಿ ಮನೆಯಲ್ಲೇ ಉಳಿದಿದ್ದರೂ ಅವರು ನಮ್ಮ ಮೇಲೆ ಆಸಿಡ್ ದಾಳಿ ನಡೆಸುವುದಾಗಿ ಬೆದರಿಸುತ್ತಿದ್ದಾರೆ" ಎಂಡರು.
ಈ ಬೆದರಿಕೆಯ ಕುರಿತಂತೆ ಯುವತಿಯರ ತಂದೆ ಪೋಲೀಸರಿಗೆ ದೂರು ನೀಡಿದ್ದಾರೆ. ಆದರೆ ಅದೆಲ್ಲದರ ಹೊರತಾಗಿ ಅವರು ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರುಗಳಿಗೆ ಪತ್ರ ಬರೆದಿದ್ದು ತಮಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲು ಹಾಗೂ ವಿಷಯ ಸಂಬಂಧ ತಕ್ಷಣ ತನಿಖೆ ನಡೆಸಲು ಕೋರಿದ್ದಾರೆ.
"ತನ್ನ ನಾಲ್ಕು ಹೆಣ್ಣುಮಕ್ಕಳನ್ನು ನೆರೆಹೊರೆ ಕೆಲವು ಯುವಕರು ಕಿರುಕುಳಕ್ಕೊಳಪಡಿಸಿಸ್ದ್ದಾರೆ ಎನ್ನುವ ಸಂಬಂಧ ವ್ಯಕ್ತಿಯೊಬ್ಬರಿಂದ ನಾವು ದೂರು ಸ್ವೀಕರಿಸಿದ್ದೇವೆ.ದೂರಿನ ಪ್ರಕಾರ ಯುವತಿಯರು ಮನೆಯಿಂಡ ಹೊರಬರುವುದು ಸಹ ಕಠಿಣವಾಗಿದೆ" ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Meerutಮೀರತ್ಯೋಗಿ ಆದಿತ್ಯನಾಥ್crime against womenletter to pm modiyogi aditynathಮಹಿಳೆಯರಿಗೆ ಕಿರುಕುಳಪ್ರಧಾನಿ ಮೋದಿಗೆ ಪತ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


