ಗೌರಿ ಹಂತಕರಿಂದ ಕೊಲೆಗೆ ಸಂಚು: ನನ್ನ ಧ್ವನಿ ಮತ್ತಷ್ಟು ಗಟ್ಟಿ- ಪ್ರಕಾಶ್ ರಾಜ್
ಹಿರಿಯ ಪತ್ರಕರ್ತೆ, ಗೌರಿ ಲಂಕೇಶ್ ಹಂತಕರಿಂದ ಕೊಲೆಗೆ ಸಂಚು ವರದಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ಪ್ರಕಾಶ್ ರಾಜ್ , ಈ ರೀತಿಯ ಬೆದರಿಕೆಗಳಿಂದ ನನ್ನ ಧ್ವನಿ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.

Published On :
ಹೈದ್ರಾಬಾದ್: ಹಿರಿಯ ಪತ್ರಕರ್ತೆ, ಗೌರಿ ಲಂಕೇಶ್ ಹಂತಕರಿಂದ ಕೊಲೆಗೆ ಸಂಚು ವರದಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ಪ್ರಕಾಶ್ ರಾಜ್, ಈ ರೀತಿಯ ಬೆದರಿಕೆಗಳಿಂದ ನನ್ನ ಧ್ವನಿ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ಕೊಲೆ ಸಂಚು ವರದಿ ಕೇಳಿ ನನ್ನಗೆ ನಗು ಬಂದಿತ್ತು. ಎಲ್ಲರಿಗೂ ಬೆದರಿಕೆ ಅಲ್ಲ. ಎಲ್ಲರಿಗೂ ನಾನು ಬೆದರಿಕೆ ಅಲ್ಲ. ಈ ರೀತಿಯ ಶಕ್ತಿಗಳು ದೇಶದಲ್ಲಿ ದ್ವೇಷವನ್ನು ಹರಡುತ್ತಿವೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ಪ್ರಕಾಶ್ ರಾಜ್ ಹೇಳಿದ್ದಾರೆ.
ಯುವಕರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಯುವಜನಾಂಗದ ಬ್ರೈನ್ ವಾಶ್ ಮಾಡುತ್ತಿರುವುದರ ಬಗ್ಗೆ ನನ್ನಗೆ ಆತಂಕವಿದೆ. ಏಕೆ ಅವರನ್ನು ಬ್ರೈನ್ ವಾಶ್ ಮಾಡಲಾಗುತ್ತಿದೆ. ಅವರು ಎಂತಹ ಸೊಕ್ಕಿನ, ಭಯವಿಲ್ಲದವರು ಎಂಬುದನ್ನು ಈ ಬೆದರಿಕೆಗಳಿಂದಲೇ ತಿಳಿಯಬಹುದಾಗಿದೆ ಎಂದರು.
ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ, ನಟ ಪ್ರಕಾಶ್ ರಾಜ್ ಅವರನ್ನು ಹತ್ಯೆ ಮಾಡಲು ಗೌರಿ ಹಂತಕರ ತಂಡ ಸಂಚು ರೂಪಿಸಿತ್ತು ಎಂಬ ವರದಿ ಕುರಿತು ಪ್ರಕಾಶ್ ರಾಜ್ ನಿನ್ನೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ಮೌನ ಧ್ವನಿಗಳ ವಿವರಣೆ ನೋಡಿ, ನನ್ನ ಧ್ವನಿ ಈಗ ಮತ್ತಷ್ಟು ಗಟ್ಟಿಯಾಗಿದೆ. ಇಂತಹ ದ್ವೇಷ ರಾಜಕಾರಣದಿಂದ ದೂರ ಆಗಲು ನೀವು ಯೋಚನೆ ಮಾಡುತ್ತಿರಾ ಎಂದು ಪ್ರಕಾಶ್ ರಾಜ್ ಸಂದೇಶದಲ್ಲಿ ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Prakash rajಹೈದ್ರಾಬಾದ್ಪ್ರಕಾಶ್ ರಾಜ್HydrabhadGauri Lankesh killerskilling planಗೌರಿ ಲಂಕೇಶ್ ಹಂತಕರುಕೊಲೆಗೆ ಸಂಚು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


