ದೇಶ

ಮುಂಬೈನ ಘಟ್ಕೋಪರ್ ಪ್ರದೇಶದಲ್ಲಿ ಲಘು ವಿಮಾನ ಪತನ, ಐವರ ಸಜೀವ ದಹನ

ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ...

ಮುಂಬೈನ ಘಟ್ಕೋಪರ್ ಪ್ರದೇಶದಲ್ಲಿ ಲಘು ವಿಮಾನ ಪತನ, ಐವರ ಸಜೀವ ದಹನ
ಚಾರ್ಟರ್ಡ್ ವಿಮಾನ ಪತನ ದೃಶ್ಯ
Published On :
ಮುಂಬೈ: ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಬಳಿ ವಿಮಾನ ಪತನಗೊಂಡಿದ್ದು ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಇಂಜಿನಿಯರ್ ಸುರ್ಬಿ ಮತ್ತು ಟೆಕ್ನಿಷನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದಾರೆ. 
ಕಿಂಗ್ ಏರ್ ಸಿ90 ಚಾರ್ಟರ್ಡ್ ವಿಮಾನ ಉತ್ತರಪ್ರದೇಶ ಸರ್ಕಾರದ್ದು ಎಂದು ಹೇಳಲಾಗಿತ್ತು. ಆದರೆ ವಿಮಾನ ಪತನ ನಂತರ ಇದೀಗ ಉತ್ತರಪ್ರದೇಶ ಸರ್ಕಾರ ಈ ವಿಮಾನವನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದೆ.
ವಿಮಾನ ಪತನದಿಂದ ಕಟ್ಟಡಕ್ಕೂ ಬೆಂಕಿ ತಲುಗಿದ್ದು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.