ಅಮರನಾಥ ಯಾತ್ರಿಕರು ನಮ್ಮ ಅತಿಥಿಗಳೇ ವಿನಃ ನಮ್ಮ ಗುರಿಯಲ್ಲ; ಹಿಜ್ಬುಲ್ ಕಮಾಂಡರ್
ಅಮರನಾಥ ಯಾತ್ರಿಕರು ನಮ್ಮ ಅತಿಥಿಗಳೇ ವಿನಃ ನಮ್ಮ ಗುರಿಯಲ್ಲ ಎಂದು ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹೇಳಿದ್ದಾನೆ...

Published On :
ಶ್ರೀನಗರ; ಅಮರನಾಥ ಯಾತ್ರಿಕರು ನಮ್ಮ ಅತಿಥಿಗಳೇ ವಿನಃ ನಮ್ಮ ಗುರಿಯಲ್ಲ ಎಂದು ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹೇಳಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಆಗಿರುವ ರಿಯಾಜ್ ನಾಯ್ಕೋ ಎಂಬಾತ ಆಡಿಯೋ ಕ್ಲಿಪ್ ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈ ಆಡಿಯೋ ಕ್ಲಿಪ್ ಇದೀಗ ವೈರಲ್ ಆಗಿದೆ.
ಅಮರನಾಥ ಯಾತ್ರೆ ನಮ್ಮ ಗುರಿಯಲ್ಲ. ಯಾತ್ರಿಕರು ತಮ್ಮ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಅಮರಯಾತ್ರೆಗೆ ಬರುತ್ತಾರೆ. ಅವರು ನಮ್ಮ ಅತಿಥಿಗಳೇ ವಿನಃ ನಮ್ಮ ಗುರಿಯಲ್ಲ ಎಂದು ಆಡಿಯೋದಲ್ಲಿ ಉಗ್ರ ಹೇಳಿಕೊಂಡಿದ್ದಾನೆ.
ಇದೇ ವೇಳೆ ಅಮರನಾಥ ಯಾತ್ರೆ ಮೇಲೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ವರದಿಗಳನ್ನು ತಳ್ಳಿಹಾಕಿರುವ ಉಗ್ರ, ನಾವು ಎಂದಿಗೂ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿಲ್ಲ. ಯಾತ್ರಿಕರ ಮೇಲೆ ನಾವು ಯುದ್ಧ ಮಾಡುವುದಿಲ್ಲ. ಬಲವಂತದಿಂದ ನಾವು ಶಸ್ತ್ರಾಸ್ತ್ರಗಳನ್ನು ಹಿಡಿಯುವಂತೆ ಮಾಡಿದವರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ನಿರಂತರ ಹೋರಾಟ ಮಾಡುತ್ತೇವೆಂದು ತಿಳಿಸಿದ್ದಾನೆ.
ಆದರೆ, ಉಗ್ರ ಹೇಳಿಕೆ ನೀಡಿರುವ ಈ ಆಡಿಯೋ ಕ್ಲಿಪ್ ಅಸಲಿಯೋ ಅಥವಾ ನಕಲಿಯೋ ಎಂಬುದು ಈವರೆಗೂ ತಿಳಿದುಬಂದಿಲ್ಲ. ಪ್ರಸಕ್ತ ಸಾಲಿನ ಮೊದಲ ಅಮರನಾಥ ಯಾತ್ರಿಕರ ಬ್ಯಾಚ್ ಇಂದು ಬೆಳಿಗ್ಗೆ ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್ ನಿಂದ ಹೊರಟಿದ್ದು, ಈ ವೇಳೆ ಉಗ್ರ ನೀಡಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಗುರಿಆಡಿಯೋaudioPilgrimsHizbul Mujahideenಹಿಜ್ಬುಲ್ ಮುಜಾಹಿದ್ದೀನ್guestsಅಮರನಾಥ ಯಾತ್ರೆAmarnath Yatraಯಾತ್ರಿಕರುಅತಿಥಿಗಳುTargets
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


