ದೇಶ

ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ 6 ಯೋಧರು ಹುತಾತ್ಮ!

ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಮಂದಿ ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾರ್ಖಂಡ್ ನಲ್ಲಿ ನಕ್ಸಲರಿಂದ ಭೀಕರ ದಾಳಿ 6 ಯೋಧರು ಹುತಾತ್ಮ!
ಸಂಗ್ರಹ ಚಿತ್ರ
Published On :
ರಾಂಚಿ: ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಮಂದಿ ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಾರ್ಖಂಡ್ ಮತ್ತು ಛತ್ತೀಸ್​ಗಡದ ಗಡಿಯಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಯೋಧರನ್ನು ಗುರಿಯಾಗಿರಿಸಿಕೊಂಡು ನಕ್ಸಲರು ನಡೆಸಿದ ಗುಂಡಿನ ದಾಳಿಗೆ ಜಾಗ್ವಾರ್​ ಪೋರ್ಸ್​ನ 6 ಯೋಧರು ಹುತಾತ್ಮರಾಗಿದ್ದಾರೆ. ಅಂತೆಯೇ 10 ಮಂದಿ ಸೈನಿಕರಿಗೆ ಗಂಭೀರಗಾಯಗಳಾಗಿವೆ.
ಈ ಬಗ್ಗೆ ಮಾಬಹಿತಿ ನೀಡಿರುವ ಸೇನಾಧಿಕಾರಿಗಳು ಜಾರ್ಖಂಡ್​ನ ಗರ್ವಾ ಜಿಲ್ಲೆಯ ಬುಧಪಹದ್​ ಪ್ರದೇಶದಲ್ಲಿ ನಕ್ಸಲರು ನಡೆಸಿದ ಲ್ಯಾಂಡ್​ಮೈನ್​ ಸ್ಫೋಟದಿಂದಾಗಿ 4 ಯೋಧರು ಹುತಾತ್ಮರಾಗಿದ್ದು, ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಗರ್ವಾ ಜಿಲ್ಲೆಯ ಚಿಂಜೋ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಬಗ್ಗೆ ಪೊಲೀಸರ ಬಳಿ ಮಾಹಿತಿ ಇತ್ತು. ಮಂಗಳವಾರ ಸಂಜೆ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ಹೋದಾಗ ನಕ್ಸಲರು ದಾಳಿ ನಡೆಸಿದ್ದಾರೆ ಎಂದು ಡಿಐಜಿ ವಿಪುಲ್​ ಶುಕ್ಲ ತಿಳಿಸಿದ್ದಾರೆ.
ಅಂತೆಯೇ ಈ ನಕ್ಸಲ್​ ಕಾರ್ಯಾಚರಣೆಯ ಹಿಂದೆ ಮಾಸ್ಟರ್​ಮೈಂಡ್​ ನಕ್ಸಲ್​ ನಾಯಕ ವಿಶ್ವನಾಥ್​ ಅಲಿಯಾಸ್​ ಸಂತೋಷ್ ಇರುವುದಾಗಿ ತಿಳಿದಿಬಂದಿದ್ದು, ವಿಶ್ವನಾಥ್​ ಆಂಧ್ರ ಪ್ರದೇಶದಿಂದ ಜಾರ್ಖಂಡ್​ಗೆ ಬಂದಿರುವುದಾಗಿ ತಿಳಿಸಿದ್ದಾರೆ. 
ಮಾಹಿತಿ ತಿಳಿದ ತಕ್ಷಣ ಕೋಬ್ರಾ ತಂಡ, ಸಿಆರ್​ಪಿಎಫ್​ ಪಡೆ ಹಾಗೂ ಪೊಲೀಸ್​ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.