ದೇಶ

ವಿವಾಹಿತೆ ಜತೆ ಅಕ್ರಮ ಸಂಬಂಧ; ಸಹೋದರರ ಹತ್ಯೆ!

ವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತನೋರ್ವ ಸಹೋದರರನ್ನು ಹತ್ಯೆ ಮಾಡಿರುವ ಘಟನೆ ದಾದ್ರಿಯಲ್ಲಿ ನಡೆದಿದೆ.

ವಿವಾಹಿತೆ ಜತೆ ಅಕ್ರಮ ಸಂಬಂಧ; ಸಹೋದರರ ಹತ್ಯೆ!
ಸಂಗ್ರಹ ಚಿತ್ರ
Published On :
ನವದೆಹಲಿ: ಮಹಿಳೆ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿವಾಹಿತನೋರ್ವ ಆಕೆಯ ಪತಿ ಹಾಗೂ ಬಾಮೈದನನ್ನು ಹತ್ಯೆ ಮಾಡಿದ್ದಾನೆ.
29 ವರ್ಷದ ಮೋಹಿತ್ ಭಾಟಿ ಎಂಬಾತ ನಿರುದ್ಯೋಗಿಯಾಗಿದ್ದು ಆತ ನೆರೆಮನೆಯಲ್ಲಿದ್ದ 26 ವರ್ಷದ ವಿವಾಹಿತ ಮಹಿಳೆ ಪೂಜಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ಪೂಜಾ ಪತಿ ಮುಕೇಶ್ ಕುಮಾರ್ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಆತಂಕಗೊಂಡ ಪೂಜಾ ಮತ್ತು ಮೋಹಿತ್ ಇಬ್ಬರು ಸೇರಿ ಮುಕೇಶ್ ನನ್ನು ಹತ್ಯೆ ಮಾಡಲು ಯೋಜಿಸಿದ್ದಾರೆ. 
ಅದರಂತೆ ಜೂನ್ 9ರಂದು ಮುಕೇಶ್ ನನ್ನು ಹತ್ಯೆ ಮಾಡಿದ ಇಬ್ಬರು ಆತನ ದೇಹವನ್ನು ದಾದ್ರಿ ಬಳಿಯ ರೈಲ್ವೆ ಹಳಿ ಬಳಿ ಎಸೆದು ಬಂದಿದ್ದಾರೆ. ದುರಾದುಷ್ಟಕರ ಸಂಗತಿ ಎಂದರೆ ತನ್ನ ಅತ್ತಿಗೆ ಜತೆ ಮೋಹಿತ್ ಸೇರುವುದನ್ನು ತಪ್ಪಿಸಲು ಮುಂದಾದ ಮುಕೇಶ್ ಸಹೋದರ ಮನೋಜ್ ಕುಮಾರ್ ಸಹ ಅಣ್ಣನಂತೆ ಕೊಲೆಯಾಗಿದ್ದಾನೆ.
ಎರಡು ಕೊಲೆಗಳಿಗೆ ಸಂಬಂಧಿಸಿದಂತೆ ಆರೋಪಿಗಳಾದ ಮೋಹಿತ್ ಭಾಟಿ ಮತ್ತು ಪುಜಾ ಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ. 
ಮನೋಜ್ ಕುಮಾರ್ ದೆಹಲಿಯ ಘಾಜಿಪುರದಲ್ಲಿ ಐದು ತಿಂಗಳಿನಿಂದ ವಾಸವಾಗಿದ್ದು ಮನೆಯ ಪಕ್ಕದಲ್ಲಿದ್ದ ಗೋದಾಮಿಗೆ ಹೋಗಿದ್ದ. ಒಂದು ಗಂಟೆ ಕಳೆದರೂ ಪತಿ ವಾಪಸ್ಸಾಗದಿದ್ದರಿಂದ ಪತ್ನಿ ಸೀಮಾ ಅಲ್ಲಿಗೆ ತೆರಳಿ ನೋಡಿದಾಗ ಗಂಡ ಮನೋಜ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ತಿಳಿಸಿದ್ದಾಳೆ. 
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಗೋದಾಮಿನಲ್ಲಿ ಅಳವಡಿಸಿದ್ದ ಸಿಸಿಟಿವಿಯ ದೃಶ್ಯಗಳನ್ನು ಗಮನಿಸಿದಾಗ ಅಲ್ಲಿ ಮೋಹಿತ್ ಭಾಟಿ ರಕ್ತದ ಕಲೆಗಳಿದ್ದ ಶರ್ಟ್ ನೊಂದಿಗೆ ಓಡಿ ಹೋಗುತ್ತಿರುವುದು ಗಮನಿಸಿದ್ದು ನಂತರ ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಜೋಡಿ ಕೊಲೆಯ ರಹಸ್ಯ ಬಯಲಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.