ದೇಶ

ಜಿಎಸ್ ಟಿ ಪ್ರಾಮಾಣಿಕ ಸಂಭ್ರಮಾಚರಣೆಯಾಗಿದ್ದರೆ, ಬಿಜೆಪಿ ಏಕೆ 5 ವರ್ಷ ಅಡ್ದಗಾಲು ಹಾಕಿತ್ತು: ಚಿದಂಬರಂ

ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ಜಿಎಸ್ ಟಿ ವಿಷಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿಎಸ್ ಟಿ ಜಾರಿಗೆ ತಂದ ಕೀರ್ತಿಯನ್ನು ಪಡೆಯಲು ಯತ್ನಿಸುತ್ತಿರುವ ಬಿಜೆಪಿ ಕಾಂಗ್ರೆಸ್ ನ ಅವಧಿಯಲ್ಲಿ 5 ವರ್ಷ

ಜಿಎಸ್ ಟಿ ಪ್ರಾಮಾಣಿಕ ಸಂಭ್ರಮಾಚರಣೆಯಾಗಿದ್ದರೆ, ಬಿಜೆಪಿ ಏಕೆ 5 ವರ್ಷ ಅಡ್ದಗಾಲು ಹಾಕಿತ್ತು: ಚಿದಂಬರಂ
ಚಿದಂಬರಂ
Published On :
ಚೆನ್ನೈ: ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ಜಿಎಸ್ ಟಿ ವಿಷಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿಎಸ್ ಟಿ ಜಾರಿಗೆ ತಂದ ಕೀರ್ತಿಯನ್ನು ಪಡೆಯಲು ಯತ್ನಿಸುತ್ತಿರುವ ಬಿಜೆಪಿ  ಕಾಂಗ್ರೆಸ್ ನ ಅವಧಿಯಲ್ಲಿ 5 ವರ್ಷ ಅಡ್ಡಗಾಲು ಹಾಕಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. 
ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ಜಿಎಸ್ ಟಿಗೆ ಸಂಬಂಧಿಸಿದಂತೆ ಬಿಜೆಪಿಯ ಪ್ರಾಮಾಣಿಕತೆಯ ಸಂಭ್ರಮಾಚರಣೆಯನ್ನು ಪ್ರಶ್ನಿಸಿದ್ದು, ಜಿಎಸ್ ಟಿ ಜಾರಿಗೆ ಬಂದ ನಂತರ ಲಕ್ಷಾಂತರ ವ್ಯಾಪಾರಿಗಳು ಹಾಗೂ ರಫ್ತುದಾರರಿಗೆ ಹಣ ಮರುಪಾವತಿಯಾಗದೇ ಸಮಸ್ಯೆಯಾಗುತ್ತದೆ ಎಂಬುದು ತಿಳಿದಿತ್ತೋ ಇಲ್ಲವೋ ಎಂದು ಕೇಳಿದ್ದಾರೆ.
ಜಿಎಸ್ ಟಿ ಸಮಗ್ರತೆ ಹಾಗೂ ಪ್ರಾಮಾಣಿಕತೆಯ ಸಂಭ್ರಮಾಚರಣೆಯಾಗಿದ್ದರೆ ಬಿಜೆಪಿಯೇಕೆ 5 ವರ್ಷಗಳ ಕಾಲ ಜಿಎಸ್ ಟಿ ಜಾರಿಗೆ ಅಡ್ಡಗಾಲು ಹಾಕುತ್ತಿತ್ತು, ಜಿಎಸ್ ಟಿ ಜಾರಿಯಲ್ಲಾಗಿರುವ ಲೋಪಗಳ ಬಗ್ಗೆ ಪ್ರಧಾನಿ, ವಿತ್ತ ಸಚಿವರು, ಹಂಗಾಮಿ ವಿತ್ತ ಸಚಿವರೇಕೆ ಮಾತನಾಡುತ್ತಿಲ್ಲ ಎಂದು ಚಿದಂಬರಂ ಕೇಳಿದ್ದಾರೆ. 
ಜಿಎಸ್ ಟಿ ಜಾರಿಯ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಒಕ್ಕೂಟ ವ್ಯವಸ್ಥೆಯ ಉದಾಹರಣೆ ಜಿಎಸ್ ಟಿಯಾಗಿದ್ದು, ಹೊಸ ವ್ಯವಸ್ಥೆಯನ್ನು ಪ್ರಮಾಣಿಕತೆಯ ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು ಹೇಳಿದ್ದರು.  ಜಿಎಸ್ ಟಿ ಜಾರಿಯಾದ 12 ತಿಂಗಳ ಬಳಿಕವೂ ಏಕೆ ಜಿಎಸ್ ಟಿ ಆರ್-ಫಾರ್ಮ್ 2 ಜಿಎಸ್ ಟಿ ಆರ್-ಫಾರ್ಮ್ 3 ನ್ನು ಇನ್ನೂ ಜಾರಿಗೊಳಿಸಿಲ್ಲ ಎಂದು ಚಿದಂಬರಂ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.