ಛತ್ತೀಸ್ ಗಢ : ಭದ್ರತಾ ಪಡೆಗಳ ಮುಂದೆ ಮೂವರು ನಕ್ಸಲೀಯರು ಶರಣಾಗತಿ
ಛತ್ತೀಸ್ ಗಢ ರಾಜ್ಯದ ಬಸ್ತರ್ ನಲ್ಲಿ ಹೊಸ ಬದುಕು ಆರಂಭಿಸುವ ಗುರಿಯೊಂದಿಗೆ ಮೂವರು ನಕ್ಸಲೀಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.ಸ್ಥಳೀಯ ನಕ್ಸಲ್ ಗುಂಪಿನಲ್ಲಿದ್ದ ಸಂತು, ರಾಮು, ಮತ್ತು ಜಗರಾಮ್ ನಿನ್ನೆ ದಿನ ಶರಣಾಗಿದ್ದಾರೆ.

Published On :
ಬಸ್ತರ್ : ಛತ್ತೀಸ್ ಗಢ ರಾಜ್ಯದ ಬಸ್ತರ್ ನಲ್ಲಿ ಹೊಸ ಬದುಕು ಆರಂಭಿಸುವ ಗುರಿಯೊಂದಿಗೆ ಮೂವರು ನಕ್ಸಲೀಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.ಸ್ಥಳೀಯ ನಕ್ಸಲ್ ಗುಂಪಿನಲ್ಲಿದ್ದ ಸಂತು, ರಾಮು, ಮತ್ತು ಜಗರಾಮ್ ನಿನ್ನೆ ದಿನ ಶರಣಾಗಿದ್ದಾರೆ.
ಈ ಪೈಕಿ ಸಂತು ಕಮಾಂಡರ್ ರೈಜು ಬಳಿ ಕೆಲಸದಲ್ಲಿದ್ದು, ಹಳ್ಳಿಗರನ್ನು ವಶದಲ್ಲಿಟ್ಟುಕೊಳ್ಳಲು ಹಾಗೂ ಆಹಾರ ಧಾನ್ಯ ಸಂಗ್ರಹಿಸಲು ಆತನನ್ನು ಬಳಸಲಾಗುತ್ತಿತಂತೆ. ಆದಾಗ್ಯೂ, ತಮ್ಮ ಕುಟುಂಬದ ಜವಾಬ್ದಾರಿ ಹೊರಬೇಕೆಂಬ ಗುರಿಯೊಂದಿಗೆ ಶರಣಾಗಿರುವುದಾಗಿ ಆತ ಹೇಳಿದ್ದಾನೆ.
ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಯಿಂದ ಪೋಷಕರು ಆತಂಕಗೊಂಡಿದ್ದು, ಅವರ ಬಳಿಗೆ ತಾವೂ ಹೋಗಬೇಕು. ತಮ್ಮ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಸಾಮಾನ್ಯರಂತೆ ಜೀವನ ಸಾಗಿಸುವುದಾಗಿ ಹೇಳಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


