ದೇಶ

ದೆಹಲಿಯಲ್ಲಿ ಜು.4ರ ವರೆಗೆ ಮರ ಕಡಿಯುವಂತಿಲ್ಲ: ಹೈಕೋರ್ಟ್

ದಕ್ಷಿಣ ದೆಹಲಿಯ ಏಳು ಕಾಲೊನಿಗಳ ಮರು ನಿರ್ಮಾಣ ಸಂಬಂಧ ಸುಮಾರು 16,500ಕ್ಕೂ ಹೆಚ್ಚು ಮರಗಳನ್ನು...

ದೆಹಲಿಯಲ್ಲಿ ಜು.4ರ ವರೆಗೆ ಮರ ಕಡಿಯುವಂತಿಲ್ಲ: ಹೈಕೋರ್ಟ್
ಯೋಜನೆ ವಿರೋಧಿ ಪರಿಸರವಾದಿಗಳ ಪ್ರತಿಭಟನೆ
Published On :
ನವದೆಹಲಿ: ದಕ್ಷಿಣ ದೆಹಲಿಯ ಏಳು ಕಾಲೊನಿಗಳ ಮರು ನಿರ್ಮಾಣ ಸಂಬಂಧ ಸುಮಾರು 16,500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಮುಂದಾಗಿದ್ದ ರಾಷ್ಟ್ರೀಯ ಕಟ್ಟಡ ನಿರ್ಮಾಣ ಕಾರ್ಪೊರೇಷನ್‌(ಎನ್ ಬಿಸಿಸಿ) ಯೋಜನೆಗೆ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತ ತಡೆ ನೀಡಿದೆ.
ಮರ ಕಡಿಯುವ ಎನ್ ಬಿಸಿಸಿ ನಿರ್ಧರಕ್ಕೆ ತಡೆ ಕೋರಿ ವೈದ್ಯ ಕೆಕೆ ಮಿಶ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿನೋದ್ ಗೋಯಲ್ ಮತ್ತು ರೇಖಾ ಪಳ್ಳಿ ಅವರು, ಗೃಹ ನಿರ್ಮಾಣ ಯೋಜನೆಗಾಗಿ ಇಷ್ಟೊಂದು ಮರ ಕಡಿದರೆ ಅದನ್ನು ರಾಷ್ಟ್ರ ರಾಜಧಾನಿ ಹೇಗೆ ನಿಭಾಯಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ. ರಸ್ತೆ ಅಗಲಿಕರಣಕ್ಕಾದರೆ ಒಪ್ಪಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಜುಲೈ 4ರ ವರೆಗೆ ಯಾವುದೇ ಮರ ಕಡಿಯದಂತೆ ಕೋರ್ಟ್ ಎನ್ ಬಿಸಿಸಿಗೆ ಆದೇಶಿಸಿದೆ.
ಇನ್ನು ಕೇಂದ್ರ ಸರ್ಕಾರದ ಈ ಯೋಜನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸ್ವಯಂಸೇವಾ ಸಂಸ್ಥೆಯೊಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಅರ್ಜಿ ಸಲ್ಲಿಸಿದ್ದು, ಅದು ಜುಲೈ 2ರಂದು ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೆ ಯಾವುದೇ ಮರ ಕತ್ತರಿಸದಂತೆ ಮತ್ತು ಅರ್ಜಿದಾರರಿಗೂ ಎನ್ ಜಿಟಿಗೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.